ಕಾಪು : ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಪೂಂದಾಡು ಎಂಬಲ್ಲಿ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಸರ್ಕಾರಿ ಪಾಳು ತೆರೆದ ಬಾಯಿಯೊಂದು ಬಲಿಗಾಗಿ ಬಾಯಿ ತೆರೆದು ನಿಂತಿದ್ದು, ಇದನ್ನು ಮುಚ್ಚುವಂತೆ ಸ್ಥಳೀಯರು ಅದೇಷ್ಟೋ ಬಾರಿ ಸ್ಥಳೀಯಾಢಳಿತಕ್ಕೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸ್ಥಳಿಯರು ಅಸಮಾದಾನ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದ ಸ್ಥಳೀಯರು ಅದೇಷ್ಟೋ ವರ್ಷಗಳಿಂದ ಕುಸಿದ ಸ್ಥಿತಿಯಲ್ಲಿರುವ ಈ ಪಾಳು ಬಾವಿಯ ಆವರಣ ಕೂಡಾ ಕುಸಿದಿದ್ದು, ಪುಟ್ಟ ಮಕ್ಕಳಿಗೂ ಅಪಾಯದ ಸೂಚನೆ ನೀಡುತ್ತಿದೆ.
ಪಕ್ಕದಲ್ಲೇ ಅಂಗನವಾಡಿ ಕೇಂದ್ರವೊಂದು ಕಾರ್ಯಚರಿಸುತ್ತಿದ್ದು, ಈ ಬಾವಿಗೆ ಅಂಟಿಕೊಂಡಿರುವ ದಾರಿಯಾಗಿಯೇ ಅಲ್ಲಿಗೆ ಸಾಗ ಬೇಕಾಗಿದೆ. ಈ ಅಪಾಯದ ಬಗ್ಗೆ ಸ್ಥಳೀಯಾಢಳಿತದ ಗಮನಕ್ಕೆ ಸಾಕಷ್ಟು ಬಾರಿ ತಂದಿದ್ದೇವೆಯಾದರೂ, ವೀಕ್ಷಣೆಗೆ ಬಂದಿದ್ದು ವಿನಃ ಯಾವುದೇ ರೀತಿಯಲ್ಲಿ ಸ್ಪಂದಿಸುವ ಸೌಜನ್ಯ ತೋರಿಲ್ಲ ಎಂಬ ಆರೋಪ ಮಾಡಿದ್ದಾರೆ.
ಮುಂದೊಂದು ದಿನ ಬಾರೀ ಅನಾಹುತ ಸಂಭವಿಸುವ ಮುನ್ನ ಗ್ರಾ.ಪಂ. ಎಚ್ಚೆತ್ತು ಕೊಳ್ಳಬೇಕಿದೆ.
Kshetra Samachara
01/08/2021 12:51 pm