ಉಡುಪಿ: ಉಡುಪಿ ನಗರದ ಹೃದಯ ಭಾಗದಲ್ಲಿರುವ ಕವಿ ಮುದ್ದಣ ಮಾರ್ಗದಿಂದ ಅಲಂಕಾರ್ ಚಿತ್ರಮಂದಿರದ ಬಳಿ ತಿರುವು ಪಡೆದಿರುವ ರಸ್ತೆಯ ನಡುವಿನಲ್ಲಿ ಸಿಮೆಂಟು ಹಾಸಿನ ಕಬ್ಬಿಣದ ಸರಳು ಮೇಲೆದ್ದಿದ್ದವು,ನಿತ್ಯ ಸಾವಿರಾರು ಜನ ಸಂಚರಿಸುವ ರಸ್ತೆ ಇದಾಗಿದೆ.ಇದರಿಂದಾಗಿ ಈ ಸರಳುಗಳು ಮೇಲೆದ್ದು ಪಾದಚಾರಿಗಳಿಗೆ,ವಾಹನಗಳಿಗೆ ಅಪಾಯವನ್ನು ಆಹ್ವಾನಿಸುತಿತ್ತು.
ಈ ಬಗ್ಗೆ ಮಾಹಿತಿ ಪಡೆದ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು, ತಾರಾನಾಥ್ ಮೇಸ್ತ ಶಿರೂರು ಅವರು ನಗರಸಭೆಗೆ ಮಾಹಿತಿ ನೀಡಿದರು. ತಕ್ಷಣ ನಗರಸಭೆ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ಸ್ಥಳಿಯ ಗ್ಯಾರೇಜಿನ ಮ್ಯಾಕನಿಕ್ ಸರಳನ್ನು ಯಂತ್ರ ಮೂಲಕ ಕತ್ತರಿಸಲು ನೆರವಾದರು.ಇದರೊಂದಿಗೆ ಜನರಿಗಾಗುವ ಅಪಾಯ ತಪ್ಪಿದಂತಾಗಿದ್ದು,ಸಮಾಜ ಸೇವಕರ ಸಮಯ ಪ್ರಜ್ಞೆ ನಗರದ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.
Kshetra Samachara
16/02/2021 01:27 pm