ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ರಾ.ಹೆ. ಪಕ್ಕದ ಗೂಡಂಗಡಿ ತೆರವು; ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆ ಪಕ್ಕದ ಸರ್ವೀಸ್ ರಸ್ತೆ ಕಾಮಗಾರಿಗಾಗಿ ಉಚ್ಚಿಲದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ನಿರ್ಮಿಸಿರುವ ಗೂಡಂಗಡಿಗಳನ್ನು ತೆರವು ಮಾಡಲು ಮುಂದಾದ ಗುತ್ತಿಗೆದಾರ ನವಯುಗ ಕಂಪೆನಿ ಸಿಬ್ಬಂದಿಯೊಂದಿಗೆ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಗುರುವಾರ ನಡೆಯಿತು.

ಉಚ್ಚಿಲಪೇಟೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ವಾಗಿದ್ದರೂ, ಸರ್ವೀಸ್ ರಸ್ತೆ ನಿರ್ಮಾಣ ಈವರೆಗೂ ನಡೆದಿಲ್ಲ. ಇದೀಗ ಗುತ್ತಿಗೆದಾರರು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಸರ್ವೀಸ್ ರಸ್ತೆ ನಿರ್ಮಾಣದ ಪೂರ್ವಭಾವಿಯಾಗಿ ಹೆದ್ದಾರಿ ಪಕ್ಕದಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಲು ಪೊಲೀಸ್ ಭದ್ರತೆಯೊಂದಿಗೆ ಹೆದ್ದಾರಿ ಗುತ್ತಿಗೆದಾರರು ಗುರುವಾರ ಆಗಮಿಸಿದ್ದರು.

ಈ ಸಂದರ್ಭ ಗೂಡಂಗಡಿ ಮಾಲೀಕರು ಮತ್ತು ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು.

Edited By : Manjunath H D
Kshetra Samachara

Kshetra Samachara

11/02/2021 12:40 pm

Cinque Terre

20.43 K

Cinque Terre

4