ಮುಲ್ಕಿ: ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮುಲ್ಕಿ- ಮೂಡುಬಿದ್ರಿ ರಾಜ್ಯ ಹೆದ್ದಾರಿಯ ಕಿಲ್ಪಾಡಿ ಪಂಚಾಯತ್ ಬಳಿಯಿಂದ ಕೆಂಚನಕೆರೆ ಸನಿಹದ ತಿರುವಿನ ಪ್ರದೇಶ ಅಂಗರಗುಡ್ಡೆ ವರೆಗೆ ಮುಖ್ಯ ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ತ್ಯಾಜ್ಯ ತಂದು ಸುರಿಯುತ್ತಿದ್ದು, ಪರಿಸರವಿಡೀ ದುರ್ನಾತ ಬೀರುತ್ತಿದೆ.
ರಸ್ತೆಯಲ್ಲಿ ಸಂಚರಿಸುವರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಬದಿ ಕೆಲವು ತಿಂಗಳಿನಿಂದ ಹುಲ್ಲಿನ ಪೊದೆ ಬಂದಿದ್ದು, ಇತ್ತೀಚೆಗೆ ರಾಜ್ಯ ಹೆದ್ದಾರಿ ಇಲಾಖೆ ಹುಲ್ಲನ್ನು ಕಟಾವ್ ಮಾಡಿದಾಗ ರಸ್ತೆ ಇಕ್ಕೆಲದಲ್ಲಿ ದುಷ್ಕರ್ಮಿಗಳು ಅಲ್ಲಲ್ಲಿ ಬಿಸಾಡಿದ ತ್ಯಾಜ್ಯ ಪತ್ತೆಯಾಗಿದೆ. ಹಲವು ಬಾರಿ ಈ ಪರಿಸರದಲ್ಲಿ ಸಂಘ-ಸಂಸ್ಥೆಗಳು ಸ್ವಚ್ಛತೆ ಕಾರ್ಯ ಮಾಡಿ ಕಸ ಬಿಸಾಡ ದಂತೆ ಎಚ್ಚರಿಕೆ ಫಲಕ ಕೂಡ ಹಾಕಲಾಗಿದೆ. ಆದರೂ ಮತ್ತೆ ಈ ಭಾಗದಲ್ಲಿ ಕಸ ಹಾಕುವುದು
ಮುಂದುವರಿದಿದೆ.
ಕೂಡಲೇ ಕಿಲ್ಪಾಡಿ ಪಂಚಾಯಿತಿ ಸಿಮೆಂಟ್ ಕಸದ ಡಬ್ಬಿ ಇಡುವ ಮೂಲಕ ತ್ಯಾಜ್ಯ ಎಸೆಯುವವರ ಕೃತ್ಯ ನಿಯಂತ್ರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಅಂಗರಗುಡ್ಡೆ ಒತ್ತಾಯಿಸಿದ್ದಾರೆ.
Kshetra Samachara
15/01/2021 08:48 pm