ಮಂಗಳೂರು: ಆ್ಯಂಟನಿ ವೆಸ್ಟ್ ಮ್ಯಾನೇಜ್ ಮೆಂಟ್ ನೌಕಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ಹೂಡಿದ್ದಾರೆ. ಪರಿಣಾಮ ಇಂದು ಮಂಗಳೂರು ನಗರದಲ್ಲಿ ತ್ಯಾಜ್ಯ ವಿಲೇವಾರಿ ನಡೆಯೋದಿಲ್ಲ.
ಆ್ಯಂಟನಿ ವೇಸ್ಟ್ ನ ಎಲ್ಲಾ ಕಾರ್ಮಿಕರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿ ತಮ್ಮ ಬೇಡಿಕೆಗಳನ್ನು ಈಡೇರಿದಬೇಕೆಂದು ಬೈಕಂಪಾಡಿಯಲ್ಲಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಚೇರಿಯ ಬಳಿ ಮುಷ್ಕರ ನಿರತರಾಗಿದ್ದಾರೆ.
ಡಿ.17ರಂದು ತಮ್ಮ 12 ಬೇಡಿಕೆಗಳನ್ನು ಈಡೇರಿಸಬೇಕೆಂದು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗಿತ್ತು. ಅಂದು ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುತ್ತದೆಂದು ಗುತ್ತುಗೆದಾರರು, ಮನಪಾ ಭರವಸೆಯಿತ್ತ ಕಾರಣ ಮತ್ತೆ ಎಲ್ಲರೂ ಕೆಲಸಕ್ಕೆ ತೆರಳಿದ್ದರು.
ಆದರೆ ಆ ಬಳಿಕ 12 ಬೇಡಿಕೆಗಳಲ್ಲಿ ಕೇವಲ ಒಂದನ್ನು ಮಾತ್ರ ಪೂರೈಸಲಾಗಿತ್ತು. ಆದ್ದರಿಂದ ಇಂದು ಮತ್ತೆ ಮುಷ್ಕರ ನಡೆಸಲಾಗುತ್ತಿದೆ.
Kshetra Samachara
02/01/2021 01:20 pm