ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ: ಪಣಿಯೂರು ರಸ್ತೆ ವಿಸ್ತರಣೆ, ಮೋರಿ ನಿರ್ಮಾಣ ಕಾಮಗಾರಿ; ಸುರಕ್ಷಾ ಕ್ರಮದತ್ತ ನಿರ್ಲಕ್ಷ್ಯ!

ವರದಿ: ಶಫೀ ಉಚ್ಚಿಲ

ಕಾಪು: ಉಚ್ಚಿಲ ಪಣಿಯೂರು ರಸ್ತೆ ವಿಸ್ತರಣೆಗಾಗಿ ಯಾವುದೇ ಮುನ್ನೆಚ್ಚರಿಕೆ ಫಲಕ ಅಳವಡಿಸದೆ ಕಾಮಗಾರಿ ಆರಂಭಿಸಿರುವ ಪರಿಣಾಮ ಈ ರಸ್ತೆಯಲ್ಲಿ ಸಂಚರಿಸುವವರು ಅಪಾಯ ಎದುರಿಸುವಂತಾಗಿದೆ. 

ಕಾಮಗಾರಿ ಆರಂಭಿಕ ಹಂತದಲ್ಲಿ ಸ್ಥಳೀಯ ಸಮಾಜ ಸೇವಕ ಯಶವಂತ ಶೆಟ್ಟಿ ಹಾಗೂ ಅವರ ತಂಡ ಸುಗಮ ಸಂಚಾರ ದೃಷ್ಟಿಯಿಂದ ಸ್ಟಿಕ್ಕರ್ ಅಳವಡಿಸಿದ್ದ ಡ್ರಮ್ ಗಳ ವ್ಯವಸ್ಥೆ ಮಾಡಿದ್ದರೂ, ಕಾಮಗಾರಿ ನಿರತ ಕಾರ್ಮಿಕರು ಅದನ್ನು ಉಪಯೋಗಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆ ಸಂಚಾರದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಸಾರ್ವಜನಿಕರು ಕಾರ್ಮಿಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ನಿರ್ಲಕ್ಷ್ಯದಿಂದ ದಾರಿಹೋಕರು ಹಾಗೂ ವಾಹನ ಚಾಲಕರು ಜೀವ ಕೈಯಲ್ಲಿಡಿದು ಈ ಪ್ರದೇಶದಲ್ಲಿ ಸಂಚರಿಸುವಂತಾಗಿದೆ. 

ಕೂಡಲೇ ಗುತ್ತಿಗೆದಾರರು ಹಾಗೂ ಸಂಬಂಧಿತ ಇಲಾಖೆ ಗಮನ ಹರಿಸಿ ಜನರಿಗಾಗುವ ತೊಂದರೆಯಿಂದ ಪಾರು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/12/2020 08:05 pm

Cinque Terre

18.42 K

Cinque Terre

0