ಮುಲ್ಕಿ: ಮುಲ್ಕಿ ನಪಂ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನ ಬಳಿಯ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರನ್ನು ಹೆದ್ದಾರಿ ಬದಿ ತೆರೆದ ಸ್ಥಳಗಳಲ್ಲಿ ಬಿಡುತ್ತಿದ್ದು, ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರಾದ ವಿಜಯ್ ಆರೋಪಿಸಿದ್ದಾರೆ.
ಕಾರ್ನಾಡು ಗಾಂಧಿ ಮೈದಾನ ಬಳಿ ಇರುವ ಅವೆನ್ಯೂ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರನ್ನು ರಾತ್ರೋರಾತ್ರಿ ಹೆದ್ದಾರಿ ಬದಿಯಲ್ಲಿ ಪಂಪ್ ಮೂಲಕ ಬಿಡಲಾಗುತ್ತಿದೆ.
ಈ ಬಗ್ಗೆ ಹಲವಾರು ಬಾರಿ ಮೂಲ್ಕಿ ನ ಪಂಗೆ ದೂರು ನೀಡಲಾಗಿದ್ದು ಕಳೆದ ಕೆಲ ದಿನಗಳ ಹಿಂದೆ ಮುಲ್ಕಿ ನಪಂ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಹುಮಹಡಿ ಕಟ್ಟಡದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರೂ ರಾತ್ರಿ ಹೊತ್ತು ಹೆದ್ದಾರಿ ಬದಿ ಶೌಚಾಲಯದ ತ್ಯಾಜ್ಯ ನೀರನ್ನುಬಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ನೀರಿನಿಂದಾಗಿ ನಾಗರಿಕರಿಗೆ ತೀವ್ರ ತೊಂದರೆಯಾಗಿದ್ದು, ರೋಗ ಭೀತಿ ಕಾಡುತ್ತಿದೆ ಎಂದು ವಿಜಯ್ ತಿಳಿಸಿದ್ದಾರೆ. ಮುಲ್ಕಿ ನಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರೂ ಇಂಥವರಿಂದಾಗಿ ಪಂಚಾಯತಿಗೆ ಕಳಂಕ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ ಮಾತನಾಡಿ, ಕಾರ್ನಾಡು ಗಾಂಧಿ ಮೈದಾನದ ಬಳಿಯ ರಾಜ್ಯ ಹೆದ್ದಾರಿ ಬಳಿ ತ್ಯಾಜ್ಯ ನೀರು ಬಿಡುವುದು ಗಮನಕ್ಕೆ ಬಂದಿದ್ದು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Kshetra Samachara
05/10/2020 08:18 pm