ಜಿಲ್ಲೆಯ ಪೆರಡಾಲದ ಕೃಷಿಕ ಭೀಮೇಶ್ ಹೊಳೆಯ ಎರಡೂ ಬದಿಗೆ ಸಾಗಲು ರೋಪ್‌ವೇ ಟ್ರಾಲಿ ನಿರ್ಮಿಸಿದ್ದಾರೆ! ಭೀಮೇಶ್ ತಂದೆ ಮಿಂಚಿನಡ್ಕ ಕೃಷ್ಣ ಭಟ್ಟರಿಗೆ ಹೊಳೆಯ ಎರಡೂ ಬದಿ ಕೃಷಿ ಭೂಮಿ ಇದೆ. ಪ್ರತಿವರ್ಷ ಅಡಕೆ ಮರದ ಕಾಲ್ಸೇತುವೆ ನಿರ್ಮಿಸುತ್ತಿದ್ದರು. ಗ್ರಾಮಸ್ಥರೂ ಇದೇ ಸೇತುವೆ ಮೂಲಕ ಸಾಗುತ್ತಿದ್ದರು.
ಆದರೆ, ಹೊಳೆಯ ಎರಡೂ ಬದಿಯ ತೋಟಕ್ಕೆ ಹೋಗಿ ಬರಲು ಏನು ಮಾಡಬಹುದು? ಎಂಬ ಚಿಂತೆ ಭೀಮೇಶ್ ಗೆ ಕಾಡುತ್ತಿತ್ತು. ಕೊನೆಗೆ ರೋಪ್ ವೇ ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ಹೊಳೆಯಿತು. ಮಂಗಳೂರು ಬಂದರಿನಲ್ಲಿ ಹಡಗು ಬಳಕೆಯ ತುಕ್ಕು ಹಿಡಿಯದ ಕಬ್ಬಿಣದ ಕಂಬ, ರೋಪ್ ಇನ್ನಿತರ ವಸ್ತು ತರಿಸಿಕೊಂಡರು.
ರೋಪ್ ವೇ ಯಲ್ಲಿ ಸಂಚರಿಸಲು ಮರದ ಟ್ರಾಲಿಯನ್ನೂ ಸಿದ್ಧಪಡಿಸಿದರು. ಈ ಮೂಲಕ 250 ಕೆ.ಜಿ. ವಸ್ತು ಸಾಗಾಟ ವ್ಯವಸ್ಥೆ ರೂಪಿಸಿದರು. ಇಬ್ಬರು ವ್ಯಕ್ತಿಗಳೂ ಏಕಕಾಲದಲ್ಲಿ ಟ್ರಾಲಿಯಲ್ಲಿ ಕುಳಿತು ಸಾಗಬಹುದು! 60 ಸಾವಿರ ವೆಚ್ಚದಲ್ಲಿ ರೋಪ್ ವೇ ನಿರ್ಮಾಣವಾಗಿದ್ದು, ಅಡಕೆ ಕೊಯ್ಲು ನಡೆಸಿ ತೋಟದಲ್ಲೇ ಗೊನೆಯಿಂದ ಅಡಕೆ ಬೇರ್ಪಡಿಸಿ ಗೋಣಿಚೀಲದಲ್ಲಿ ತುಂಬಿಸಿ ರೋಪ್ ವೇಯಿಂದ ಸಾಗಿಸುತ್ತಿದ್ದು, ಗೊಬ್ಬರ ಸಾಗಾಟಕ್ಕೂ ಬಳಸುತ್ತಿದ್ದಾರೆ. ಹಗ್ಗ ಎಳೆದು ಅಥವಾ ರಾಟೆ ತಿರುಗಿಸಿದರೆ ಸರಕು ಸಹಿತ ಟ್ರಾಲಿ ಸರಾಗವಾಗಿ ಓಡುತ್ತೆ.
Kshetra Samachara
16/02/2022 04:10 pm