ಕೊಲ್ಲೂರು: ಕಳೆದ ಕೆಲವು ದಿನಗಳಿಂದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ. ಮೇ 10ರಂದು ಸಂಪ್ರದಾಯದಂತೆ ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು, ದಾಖಲೆಯ 1,53,41,923 ರೂ. ಸಂಗ್ರಹವಾಗಿದೆ. ಇದಲ್ಲದೆ ಎರಡೂವರೆ ಕೆಜಿ ಬಂಗಾರ ಮತ್ತು 4 ಕೆಜಿಗೂ ಅಧಿಕ ಬೆಳ್ಳಿ ಸಂಗ್ರಹವಾಗಿದೆ.
ಈ ವರ್ಷದ ಪ್ರಾರಂಭದಿಂದ ಭಕ್ತರು ಬರುವುದು ಹೆಚ್ಚಾಗಿದೆ. ಪ್ರತೀದಿನ ಕನಿಷ್ಠ 10 ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೇಗುಲದಲ್ಲಿ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದ ಹಣ ಸಂಗ್ರಹವಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ನಡೆಯುತ್ತಿದ್ದು, ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಸಂಗ್ರಹವಾಗಿತ್ತು.
PublicNext
11/05/2022 05:21 pm