ಮುಲ್ಕಿ: ರಾಜ್ಯ ಮತ್ತು ಕೇಂದ್ರ ಸರಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲವು ರೈತ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆ ಮೂಲ್ಕಿ ಹೋಬಳಿಯಲ್ಲಿ ವಿಫಲವಾಗಿದೆ.
ಬೆಳಗ್ಗಿನಿಂದಲೇ ಮೂಲ್ಕಿಯಲ್ಲಿ ದೈನಂದಿನ ಚಟುವಟಿಕೆಗಳು ನಡೆಯುತ್ತಿದ್ದು, ವಾಹನಗಳು ನಿರಾತಂಕವಾಗಿ ಸಂಚರಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಯಲ್ಲಿ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದು ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಮೂಲ್ಕಿ ಕಿನ್ನಿಗೋಳಿ ಮೂಡಬಿದ್ರೆ ಕಟೀಲು ಹಳೆಯಂಗಡಿ ಪಡುಪಣಂಬೂರು ಪರಿಸರದಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ.
ಅಂಗಡಿ, ಹೋಟೆಲ್ ತೆರೆದಿದ್ದು ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ. ಮೂಲ್ಕಿ ಹೋಬಳಿಯ ರೈತರ ಪ್ರಮುಖ ಕೇಂದ್ರವಾದ ಕಿನ್ನಿಗೋಳಿ-ಕಟೀಲು ಪ್ರದೇಶದಲ್ಲಿ ಬಂದ್ ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಇತಿಹಾಸ ಪ್ರಸಿದ್ಧ ಬಪ್ಪನಾಡು ದೇವಸ್ಥಾನ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗಳಿಗೆ ಭಕ್ತರು ಎಂದಿನಂತೆ ಭೇಟಿ ನೀಡುತ್ತಿದ್ದಾರೆ. ಸರಕಾರಿ ಕಚೇರಿಗಳು, ಬ್ಯಾಂಕು ವಹಿವಾಟು ಎಂದಿನಂತೆ ನಡೆದಿವೆ. ಮೂಲ್ಕಿ ಪೊಲೀಸ್ ಠಾಣಾ ಎಸ್ಸೈ ಶೀತಲ್ ಅಲಗೂರು ನೇತೃತ್ವದಲ್ಲಿ ಠಾಣಾ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತು ನಡೆಸಿದ್ದು ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಕೊರೊನಾ ಮಹಾಮಾರಿಯ ಬಳಿಕ ಮೂಲ್ಕಿ ಹೋಬಳಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಈಗ ಪುನ: ಬಂದ್ ಅವಶ್ಯಕತೆ ಇತ್ತೇ? ಎಂದು ಜನ ಹೇಳಿಕೊಳ್ಳುವುದು ಕೇಳಿಸಿತು.
ಒಟ್ಟಾರೆಯಾಗಿ ರೈತ ಸಂಘಟನೆಗಳು ಕರೆಗೊಟ್ಟಿದ್ದ ಕರ್ನಾಟಕ ಬಂದ್ ಮೂಲ್ಕಿ ಹೋಬಳಿಯಲ್ಲಿ ಸಂಪೂರ್ಣ ವಿಫಲವಾಗಿದೆ.
Kshetra Samachara
28/09/2020 02:16 pm