ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಶ್ವಥಕಟ್ಟೆಯ ಪಾವಿತ್ರ್ಯತೆಗೆ ಧಕ್ಕೆ; ಕ್ರಮಕ್ಕೆ ಆಗ್ರಹ

ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದ ಪವಿತ್ರ ಅಶ್ವಥಕಟ್ಟೆಯ ಸ್ಥಳವು ಅಪವಿತ್ರಗೊಳ್ಳುತ್ತಿದೆ. ಇದು ಕುಡುಕರ ಆಶ್ರಯ ತಾಣವಾಗಿದ್ದು, ಅಲ್ಲಿಯೇ ಶೌಚಾದಿ ಕ್ರಿಯೆ ನಡೆಸುವುದು, ಉಗುಳುವುದು, ಕಸ ತ್ಯಾಜ್ಯಗಳನ್ನು ಎಸೆದು ಸ್ಥಳದ ಪ್ರಾವಿತ್ರ್ಯತೆ ಹಾಳು ಮಾಡುತ್ತಿರುವುದು ಕಂಡುಬಂದಿದೆ.

ಇದರಿಂದಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಂತಾಗಿದೆ. ತಕ್ಷಣ ನಗರಸಭೆ ಇಲ್ಲಿ ಉದ್ಭವವಾಗಿರುವ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಜರುಗಿಸಬೇಕು. ಅಶ್ವಥಕಟ್ಟೆಯ ಒಳ ಪ್ರವೇಶಕ್ಕೆ ತಡೆಯೊಡ್ಡಲು ಕಬ್ಬಿಣದ ಬೇಲಿ ಅಳವಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/10/2022 12:37 pm

Cinque Terre

7.76 K

Cinque Terre

2

ಸಂಬಂಧಿತ ಸುದ್ದಿ