ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪ್ರಾಕೃತಿಕ ವಿಕೋಪದಲ್ಲಿ ಸಂಕಷ್ಟ‌ಕ್ಕೆ ಸಿಲುಕಿದವರ ನೆರವಿಗೆ ನಿಂತ ಡಾ.ಉಮ್ಮರ್ ಬೀಜದಕಟ್ಟೆ ಮನವಿ

ಸುಳ್ಯ: ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ದುರಂತದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆ ಗೂನಡ್ಕದ ಸಜ್ಜನ ಪ್ರತಿಷ್ಠಾನ ಸಿದ್ಧವಾಗಿದೆ. ಸುಳ್ಯ ತಾಲೂಕಿನಲ್ಲಿ ‌ಈಗಾಗಲೇ ಕಂಡು ಕೇಳರಿಯದ ರೀತಿಯಲ್ಲಿ ‌ಮಳೆ ಸುರಿಯುತ್ತಿದ್ದು, ತಾಲೂಕಿನ ವಿವಿಧ ಸಜ್ಜನ ಸಭಾಂಗಣ ಭಾಗಗಳಲ್ಲಿ ನೆರೆ ನೀರು ನದಿ ತುಂಬಿ, ಪ್ರವಾಹದಿಂದ ಕೃಷಿ ಭೂಮಿಗಳು, ಮನೆಗಳು ಜಲಸಮಾಧಿಯಾಗಿದೆ.‌

ವ್ಯಾಪಾರ ಉದ್ದಿಮೆ ನಡೆಸುವವರ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಹಲವಾರು ನಿರಾಶ್ರಿತರು ಅವರವರ ಮನೆಗಳಲ್ಲಿ ವಾಸಿಸಲು ಸಾಧ್ಯವಾಗದೇ ಅಭಯ ಕೇಂದ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ.‌ ಹಲವರು ಉಟ್ಟ ಬಟ್ಟೆಯಲ್ಲಿ ಬಂದು ಸಾಂತ್ವಾನ ಕೇಂದ್ರಗಳಲ್ಲಿ ನೆಲೆಸಿದ್ದಾರೆ. ಗೂನಡ್ಕದಲ್ಲಿರುವ ಸಜ್ಜನ ಪ್ರತಿಷ್ಠಾನದ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸಂಕಷ್ಟಕ್ಕೆ ಸಿಲುಕಿದ ಹಲವು ಕುಟುಂಬದ ಸದಸ್ಯರಿದ್ದಾರೆ. ಈಗಾಗಲೇ ತಾಲೂಕು ಆಡಳಿತ ಸಾಕಷ್ಟು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಅದಲ್ಲದೇ ನಮ್ಮ ಸಜ್ಜನ ಪ್ರತಿಷ್ಠಾನದ ಮೂಲಕ ಅವರಿಗೆ ಬೇಕಾಗುವ ಸಾಮಗ್ರಿಗಳನ್ನು ತಲುಪಿಸುತ್ತಿದ್ದೇವೆ..ಇನ್ನೂ ಯಾರದರೂ ಸಮಸ್ಯೆಯಲ್ಲಿ ಸಿಲುಕಿದವರಿದ್ದರೆ ಸಜ್ಜನ ಪ್ರತಿಷ್ಠಾನವನ್ನು ಸಂಪರ್ಕಿಸಿ ಎಂದು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ. ಸಜ್ಜನ ಪ್ರತಿಷ್ಠಾನದ ನಿರ್ದೇಶಕರರಾದ ರಹೀಮ್ ಬೀಜದಕಟ್ಟೆ 9481084557 ಅಥವಾ ಪತ್ರಕರ್ತ ಶರೀಫ್ ಜಟ್ಟಿಪಳ್ಳ 9901109883 ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.

Edited By : Vijay Kumar
Kshetra Samachara

Kshetra Samachara

05/08/2022 01:07 pm

Cinque Terre

5.07 K

Cinque Terre

2

ಸಂಬಂಧಿತ ಸುದ್ದಿ