ಸುಳ್ಯ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸುಮಾರು ಎರಡು ಗಂಟೆಯಿಂದ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲ್ಮಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆ ಸುರಿಯುತ್ತಿದೆ.
ಕಲ್ಲಾಜೆಯಲ್ಲಿ 4 ಗಂಟೆಯಿಂದ ಆರಂಭವಾದ ಮಳೆ ಭೀಕರವಾಗಿ ಸುರಿದಿದೆ. ಇದುವರೆಗೆ 150 ಮಿಮೀಗಿಂತಲೂ ಅಧಿಕ ಮಳೆ ಸುರಿದಿದೆ ಎಂದು ಕಲ್ಲಾಜೆಯ ಸಿಜೋ ಅಬ್ರಹಾಂ ತಿಳಿಸಿದ್ದಾರೆ. ಭಾರೀ ಮಳೆಗೆ ಹೊಳೆ ನೀರು ಉಕ್ಕಿ ಹರಿದು ಕೊಲ್ಲಮೊಗ್ರ ಹಾಗೂ ಹರಿಹರದಲ್ಲಿ ಸೇತುವೆ ಮುಳುಗಡೆಯಾಗಿದೆ.
Kshetra Samachara
02/08/2022 11:03 am