ವರದಿ: ರಂಜಿತಾ ಮೂಡುಬಿದಿರೆ
ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಗೆ ಸ್ವರ್ಣ ನದಿಯಿಂದ ಕುಡಿಯುವ ನೀರು ಸರಬರಾಜು ಆಗುವ ಮುಂಡ್ಲಿ ಡ್ಯಾಮ್ ನಲ್ಲಿ ಖಾಸಗಿ ವಿದ್ಯುತ್ ಕಂಪನಿ ತಲೆಯೆತ್ತಿದ್ದು, ಇದರಿಂದಾಗಿ ಮುಂಡ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ ಕಾರ್ಕಳಕ್ಕೆ ಸಂಪರ್ಕಿಸುವ ಏಕೈಕ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ!
ಈ ವಿದ್ಯುತ್ ಕಂಪನಿ ಸ್ಥಾಪನೆ ಸಂದರ್ಭ ಸಾವಿರಾರು ಸ್ಫೋಟಕಗಳನ್ನು ಬಳಸಿ ಬಂಡೆಕಲ್ಲು ತೆರವುಗೊಳಿಸಿದರ ಪರಿಣಾಮ ಈ ಸೇತುವೆ ಈಗ ಅಪಾಯದ ಅಂಚಿನಲ್ಲಿದೆ. ಸಾಕಷ್ಟು ಬಾರಿ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಫಲಿತಾಂಶ ಶೂನ್ಯ. ಅದಲ್ಲದೆ, 3 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಸ್ವರ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಈಗಾಗಲೇ ಘನ ವಾಹನಗಳು ಸೇತುವೆ ಮೇಲಿಂದ ವಾಹನ ಸಂಚಾರವನ್ನು ನಿಲ್ಲಿಸಿದೆ. ಈ ಕೃತಕ ನೆರೆಯಿಂದಾಗಿ ಡ್ಯಾಮ್ ನ ಸುತ್ತಮುತ್ತಲಿನ ಕೃಷಿ ಭೂಮಿ ನೀರು ಪಾಲಾಗಿದೆ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
Kshetra Samachara
05/07/2022 10:54 pm