ವಿಟ್ಲ: ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ವಾಹನಗಳು ಸುತ್ತಿ ಬಳಸಿ ಪ್ರಯಾಣ ಬೆಳೆಸುವಂತಾಗಿದೆ.
ಬೆಳಗ್ಗಿಯಿಂದಲೇ ನೀರಿನ ಮಟ್ಟ ಏರುತ್ತಿದ್ದು, ಅಲ್ಪ ಹೊತ್ತು ಇಳಿಮುಖವಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು ನೀರು ರಸ್ತೆಗೆ ಬಂದಿದೆ. ಇದೀಗ ರಸ್ತೆಯ ಎರಡೂ ಕಡೆಗಳಲ್ಲಿ ಸ್ಥಳೀಯ ನಾಗರೀಕರು ಕಾವಲು ಕಾಯುತ್ತಿದ್ದು ಅಪಾಯಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
05/07/2022 12:31 pm