ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಕ್ಕಟ್ಟೆ: ಚಾರುಕೊಟ್ಟಿಗೆ ಮದಗ ಹೂಳೆತ್ತುವೆ; ವಾರಾಹಿ ನೀರು ತುಂಬಲಿದೆ ಕೆರೆ ‌

ತೆಕ್ಕಟ್ಟೆ: ʼವಿಶ್ವ ಜಲ ದಿನʼ ವಾದ ಇಂದು ಕುಂದಾಪುರ ತಾಲೂಕು ಕೊರ್ಗಿ ಗ್ರಾಮ ಪಂಚಾಯತ್ ವತಿಯಿಂದ ಚಾರುಕೊಟ್ಟಿಗೆ ಮದಗದ ಹೂಳೆತ್ತುವ ಕೆಲಸ ಭರದಿಂದ ಸಾಗಿದೆ.

ಈ ಮದಗವು 5 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಅನೇಕ ವರ್ಷಗಳಿಂದ ವಾರಾಹಿ ನೀರಿಗಾಗಿ ಇಲ್ಲಿನ ಜನತೆ ಬೇಡಿಕೆ ಇಟ್ಟಿದ್ದರು. ಮುಂಬರುವ ದಿನಗಳಲ್ಲಿ ಮದಗಕ್ಕೆ ವಾರಾಹಿ ನೀರನ್ನು ಹಾಯಿಸಿದರೆ ಸ್ಥಳೀಯ ರೈತಾಪಿ ವರ್ಗಕ್ಕೆ ಸಹಾಯವಾಗಲಿದೆ. ಮದಗದ ಅಭಿವೃದ್ಧಿ ಕಾರ್ಯ ನಡೆಸಲು ಸೂಕ್ತ ರಸ್ತೆ ಸಂಪರ್ಕವಿಲ್ಲದಿರುವುದರಿಂದ ಹೂಳೆತ್ತುವ ಕೆಲಸದೊಂದಿಗೆ ಸುಸಜ್ಜಿತ ರಸ್ತೆ ಸಂಪರ್ಕ ಒದಗಿಸಬೇಕು ಎನ್ನುವುದು ಇಲ್ಲಿನ ಸಾರ್ವಜನಿಕರ ಬೇಡಿಕೆ.

ವರದಿ: ಭರತ್ ಶೆಟ್ಟಿ ‌ʼಪಬ್ಲಿಕ್‌ ನೆಕ್ಸ್ಟ್ʼ ತೆಕ್ಕಟ್ಟೆ

Edited By : Nagesh Gaonkar
Kshetra Samachara

Kshetra Samachara

22/03/2022 10:13 pm

Cinque Terre

15.91 K

Cinque Terre

0