ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಭಾರೀ ಮಳೆ ,ಹಲವು ಮನೆಗಳು ಜಲಾವೃತ: ಅಗ್ನಿಶಾಮಕ ದಳದಿಂದ ಸುರಕ್ಷಿತ ಸ್ಥಳಕ್ಜೆ ಸ್ಥಳಾಂತರ!

ಕುಂದಾಪುರ: ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಇಂದೂ ಕೂಡ ಮುಂದುವರೆದಿದೆ.ಕೋಟ ಸಮೀಪದ ಉಪ್ಲಾಡಿಯಲ್ಲಿ ನೆರೆಯಿಂದ ಹಲವು ಮನೆಗಳು ದಿಗ್ಬಂಧನಕ್ಕೊಳಗಾಗಿವೆ. ಉಪ್ಲಾಡಿ, ಬೆಟ್ಲಕ್ಕಿ, ಬನ್ನಾಡಿ ಪರಿಸರದಲ್ಲಿ ಮನೆಗಳಿಗೆ ನೆರೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ನಿನ್ನ ರಾತ್ರಿಯಿಂದ ಈ ಗ್ರಾಮಗಳಲ್ಲಿ ನಿರಂತರ ಮಳೆಯಾಗುತ್ತಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿಯಿಂದ ಸ್ಥಳೀಯರು ಭಯದಿಂದಲೇ ಸಮಯ ಕಳೆಯುವಂತಾಗಿದೆ.ಇವತ್ತು ಕುಂದಾಪುರದ ಅಗ್ನಿಶಾಮಕ ದಳ ಜನರ ರಕ್ಷಣೆಗೆ ಧಾವಿಸಿದೆ.ನೆರೆ ನೀರು ಸುತ್ತುವರಿದ ಮನೆಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯ ನಡೆಸಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದರು. ಈ ಭಾಗದ ಮನೆಗಳಲ್ಲದೆ ಕೃಷಿ ಭೂಮಿ ಕೂಡ ಮಳೆ ನೀರಿನಿಂದ ಆವೃತ್ತವಾಗಿದೆ.ಇಲ್ಲಿ ಹರಿಯುವ ಹೊಳೆ ಕೂಡ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಡ ತಲುಪಿದೆ.

Edited By :
Kshetra Samachara

Kshetra Samachara

06/07/2022 03:10 pm

Cinque Terre

7.83 K

Cinque Terre

0

ಸಂಬಂಧಿತ ಸುದ್ದಿ