ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ ಬೀಚ್ ನಲ್ಲಿ ಹೈಮಾಸ್ಟ್ ಲೈಟ್ ಕಂಬ ಕುಸಿಯುವ ಭೀತಿ, ಆತಂಕ

ವರದಿ: ಶಫೀ ಉಚ್ಚಿಲ

ಪಡುಬಿದ್ರಿ: ಇಲ್ಲಿನ ಮುಖ್ಯಬೀಚ್ ನಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ಅಳವಡಿಸಿದ್ದ ಹೈಮಾಸ್ಟ್ ದೀಪದ ಕಂಬವೊಂದು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

ಎರಡು ತಿಂಗಳ ಹಿಂದೆ ಉಂಟಾದ ಕಡಲ್ಕೊರೆತದಿಂದ ಈ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿಗಳು ಸಮುದ್ರ ಪಾಲಾಗಿದ್ದು, ಕೆಲ ಹೈಮಾಸ್ಟ್ ದೀಪದ ಕಂಬಗಳು ನೀರು ಪಾಲಾಗಿ ಬೀಚ್ ನ ಅಂದಗೆಡಿಸಿದೆ. ಅಲ್ಲದೆ, ಬೀಚ್ ಬಳಿ ನಿರ್ಮಿಸಿದ ವೇದಿಕೆ ಭಾಗಶಃ ಕುಸಿದು ಹೋಗಿದೆ. ಇದೇ ಸ್ಥಳದಲ್ಲಿರುವ ಹೈಮಾಸ್ಟ್ ದೀಪ ಕಂಬದ ಬುಡಕ್ಕೆ ಹಾಕಿದ್ದ ಕಾಂಕ್ರೀಟ್ ಕಿತ್ತುಹೋಗಿದ್ದು, ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಂಬದ ಈಗಿರುವ ಸ್ಥಿತಿಯಿಂದ ಅಪಾಯವಾಗುವ ಲಕ್ಷಣಗಳಿದ್ದು, ಕಂಬ ತೆರವಿಗೆ ಇಲಾಖೆ ಗಮನ ಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

09/11/2020 05:52 pm

Cinque Terre

24.81 K

Cinque Terre

4

ಸಂಬಂಧಿತ ಸುದ್ದಿ