ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಫಿಶ್ ವೇಫರ್ಸ್ ತಯಾರಿಕಾ ಘಟಕಕ್ಕೆ ಜ. 19ರಂದು ಶಂಕುಸ್ಥಾಪನೆ

ಬೈಂದೂರು: ಕೊಲ್ಲೂರು ರಸ್ತೆಯ ಎಲ್ಲೂರಿನ ವಿಶಾಲ ನಿವೇಶನದಲ್ಲಿ ಮೀನಿನ ಮೌಲ್ಯವರ್ಧಿತ ಖಾದ್ಯಗಳ ತಯಾರಿಕಾ ಘಟಕ "ಮತ್ಸ್ಯಬಂಧನಕ್ಕೆ" ಕ್ಕೆ ಜನವರಿ 19ರಂದು ಶಂಕುಸ್ಥಾಪನೆ ನಡೆಯಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮತ್ಸ್ಯಬಂಧನ ಸಂಸ್ಥೆಯ ಆಡಳಿತ ನಿರ್ದೇಶಕ ಅರುಣ್ ಧನಪಾಲ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮೀನಿನ ಖಾದ್ಯಗಳಿಗೆ ಮಾರುಕಟ್ಟೆ ಒದಗಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಚಿಪ್ಸ್ ಮತ್ತು ವೇಪರ್ಸ್ ಗಳು ಜಂಕ್ ಫುಡ್ ಆಗಿರೋದ್ರಿಂದ ಅವು ಆರೋಗ್ಯಕ್ಕೆ ಹಾನಿಕರ. ಅವುಗಳಿಗೆ ಬದಲಾಗಿ, ಸ್ನ್ಯಾಕ್ ಶೋಧನೆಗೆ ಹೊರಟಾಗ ಗೋಚರಿಸಿದ್ದು ಪಿಶ್ ವೇಫರ್ಸ್ ಇದರಲ್ಲಿ ಯಾವುದೇ ರಾಸಾಯನಿಕ ಹಾಗೂ ಸಂರಕ್ಷಕಗಳನ್ನು ಬಳಸಲಾಗೋದಿಲ್ಲ. ಹೀಗಾಗಿ ಈ ಉತ್ಪನ್ನಗಳು ಆರೋಗ್ಯಕ್ಕೆ ಪೂರಕ ಎಂದು ಅರುಣ್ ಧನಪಾಲ್ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/01/2021 03:56 pm

Cinque Terre

18.31 K

Cinque Terre

0

ಸಂಬಂಧಿತ ಸುದ್ದಿ