ಬೈಂದೂರು: ಕಳೆದ ತಿಂಗಳು ಎರಡು ಬಾರಿ ಭಾರೀ ಮಳೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಪ್ರದೇಶ ತೀವ್ರ ಕಡಲ್ಕೋರೆತಕ್ಕೀಡಾಗಿತ್ತು.ಮಾತ್ರವಲ್ಲ , ಶಿರೂರು ಕಡಲತೀರದಲ್ಲಿ ಬೋಟ್ ಗಳಿಗೆ ಹಾನಿಯಾಗಿ ಕೋಟ್ಯಂತರ ರೂ ನಷ್ಟ ಸಂಭವಿಸಿತ್ತು.
ಈ ಪ್ರದೇಶಗಳಿಗೆ ಇಂದು ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ವೀಕ್ಷಿಸಿದರು. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ , ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಅಕ್ಷಯ ಮಚೀಂದ್ರ, ಸಿ.ಇ.ಒ ಪ್ರಸನ್ನ, ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು, ಬೈಂದೂರು ತಹಶೀಲ್ದಾರ್ ಕಿರಣ ಗೋರಯ್ಯ ಮತ್ತಿತರರು ತಂಡದ ಜೊತೆಗಿದ್ದರು.
Kshetra Samachara
08/09/2022 08:21 pm