ಮಣಿಪಾಲ: ಮಣಿಪಾಲ ಸಮೀಪದ ಪರ್ಕಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಧ್ವಾನ ಇನ್ನೂ ಮುಗಿದಿಲ್ಲ.ರಸ್ತೆ ಅಗಲೀಕರಣದ ವಿರುದ್ಧ ಇಲ್ಲಿ ಹಲವರು ತಡೆಯಾಜ್ಞೆ ತಂದ ಪರಿಣಾಮ ಹೆದ್ದಾರಿ ಕಾಮಗಾರಿ ಹಲವು ವರ್ಷ ತಡವಾಯಿತು.ಇದೀಗ ಕಾಮಗಾರಿ ಭರದಿಂದ ಸಾಗುತ್ತಿದೆ ಎನ್ನುವಾಗ ಸ್ಥಳೀಯರ ವಿರೋಧ ಇನ್ನೂ ತಣ್ಣಗಾಗಿಲ್ಲ.ಮೊನ್ನೆ ಮೊನ್ನೆ ಇಲ್ಲಿ ಕಾಮಗಾರಿಗೆ ಕೆಲ ಕಿಡಿಗೇಡಿಗಳು ತಡೆ ಒಡ್ಡಿದ್ದರು.ಇದೀಗ ಮತ್ತೆ ಸ್ಥಳೀಯರೊಬ್ವರು ಕಾಮಗಾರಿಗೆ ತಡೆ ಒಡ್ಡಿ ಇಂಜಿನಿಯರ್ ಗಳನ್ನು ನಿಂದಿಸಿದ ವಿಡಿಯೊ ವೈರಲ್ ಆಗಿದೆ. ತಕ್ಷಣ ಕೆಲಸ ನಿಲ್ಲಿಸಿ ,ವರ್ಕ್ ಆರ್ಡರ್ ತನ್ನಿ ಎಂದು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸ್ಥಳೀಯರೊಬ್ವರು ದಬಾಯಿಸಿದ್ದಾರೆ.ಇದು ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಕ್ಕೆ ಸಮಾಧಾನವಾಗದ ಸ್ಥಳೀಯ ವ್ಯಕ್ತಿ , ಯಾರು ನಿಮಗೆ ಹೇಳಿದವರು ,ಡಿಸಿಯನ್ನು ಕರೆದುಕೊಂಡು ಬಾ... ಹೋಗು. ಕೆಲಸಕ್ಕೆ ಅಡ್ಡಿಪಡಿಸ್ತಾರೆ ಎಂದು ಕಂಪ್ಲೇಂಟ್ ಮಾಡು ಹೋಗು....ಅಲ್ಲಿ ನಿಮಗೆ ಜಾಗ ಬಿಟ್ಟಿದ್ದೇವೆ ಇಲ್ಲಿ ಬಿಡಲ್ಲ.ನಿಮಗೆ ಖುಷಿ ಬಂದ ಹಾಗೆ ಮಾಡಲು ಬಿಡಲ್ಲ...ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ.
ಮುಖ್ಯವಾಗಿ ಈ ಭಾಗದಲ್ಲಿ ಜಾಗ ಇದ್ದವರು ಅದನ್ನು ಕಳೆದುಕೊಂಡಿದ್ದು ಸೂಕ್ತ ಪರಿಹಾರ ಸಿಗದೇ ಇರುವುದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
Kshetra Samachara
26/05/2022 07:39 pm