ಉಳ್ಳಾಲ: ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಬಳಿಯ ಹತ್ತಿಯ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ ತಗುಳಿ ಫ್ಯಾಕ್ಟರಿ ಹೊತ್ತಿ ಉರಿದ ಘಟನೆ ನಡೆದಿದೆ.
ತೌಡುಗೋಳಿ ಕ್ರಾಸ್ ಬಳಿಯಲ್ಲಿರುವ ನರಿಂಗಾನ ಗ್ರಾಮ ಪಂಚಾಯತ್ ಕಚೇರಿಯ ಸಮೀಪದ ಹತ್ತಿಯ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ದಾಸ್ತಾನು ಕಟ್ಟಡವು ಸಂಪೂರ್ಣ ಸುಟ್ಟು ಹೋದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಮಂಗಳವಾರದಂದು ವಿಪರೀತ ಮಳೆ ಸುರಿಯುತ್ತಿದ್ದು ಈ ವೇಳೆ ಹತ್ತಿ ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ ತಗುಲಿದೆ.ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ ಪಾಂಡೇಶ್ವರದಿಂದ ವಾಹನ ಬರಬೇಕಾದ ಅನಿವಾರ್ಯತೆಯಿಂದ ಸಕಾಲಕ್ಕೆ ಸ್ಥಳಕ್ಕೆ ತಲುಪದ ಕಾರಣ ನಷ್ಟ ಸಂಭವಿಸಿದೆ.
ಸುಮಾರು ನಲ್ವತ್ತು ನಿಮಿಷದ ಬಳಿಕ ಅಗ್ನಿಶಾಮಕದಳದ ವಾಹನ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನನಡೆಸಿದರೂ ಅದಾಗಲೇ ಹತ್ತಿ ದಾಸ್ತಾನಿದ್ದ ಕಟ್ಟಡವು ಸಂಪೂರ್ಣ ಸುಟ್ಟು ಹೋಗಿದೆ.
Kshetra Samachara
21/06/2022 06:40 pm