ಪಡುಪಣಂಬೂರು: ಹಳೆಯಂಗಡಿಯ ಸಾರ್ವಜನಿಕ ಗಣೇಶೋತ್ಸವದ ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಪಡುಪಣಂಬೂರು ಗೆಳೆಯರ ತಂಡದ ಗೌರವ ಸಲಹೆಗಾರ ವಿನೋದ್ ಸಾಲ್ಯಾನ್ ಬೆಳ್ಳಾಯರು ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಶೆಟ್ಟಿ ವಿಭಿನ್ನವೇಷಧಾರಿಯಾಗಿ ದಾನಿಗಳ ಮೂಲಕ ನೆರವು ಪಡೆದು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸೇವಾನಿಥಿ 1, 33,400 ಹಸ್ತಾಂತರಿಸಿ ಮಾದರಿಯಾಗಿದ್ದಾರೆ.
ಹಳೆಯಂಗಡಿ ಜಾರಂದಾಯ ದೈವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರ್ಚಕ ರಾಮಭಟ್ ನೇತೃತ್ವದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಾ.ಆರವ್ ತೋಕೂರು, ಬೇಬಿ ಶ್ರೀಯಾ ಮೂಡಬಿದ್ರೆ ರವರಿಗೆ ತಲಾ 61,700 ರೂ, ವ್ಯಾಸ ರಾವ್ ಪಡು ಪಣಂಬೂರು ಹಾಗೂ ಹರ್ಷೇಂದ್ರ ಕೆರೆಕಾಡು ರವರಿಗೆ ತಲಾ 5,000ರೂ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭ ಗೆಳೆಯರ ತಂಡದ ಪದಾಧಿಕಾರಿಗಳಾದ ನವೀನ್ ಪಡುತೋಟ ಮೆಸ್ಕಾಂ, ಮೋಹನ್ ಕುಂದರ್, ಶುಬ್ರತ್ ದೇವಾಡಿಗ, ಪ್ರವೀಣ್, ದಿವಾಕರ್ ಉಪಸ್ತಿತರಿದ್ದರು.
PublicNext
07/09/2022 05:15 pm