ಉಡುಪಿ: ಈ ವರ್ಷ ಮೇ.22 ರ ತನಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿಆರ್ ಎಸ್ ಲೈಫ್ ನವರು ನಡೆಸುತ್ತಿದ್ದರು. ಆ ಬಳಿಕ ಕಾರಣಾಂತರಗಳಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ವಹಿಸಿಕೊಂಡಿದೆ. ಸದ್ಯ ಸಿಬ್ಬಂದಿ ಕೊರತೆ ನಮ್ಮ ಬಹುದೊಡ್ಡ ಸಮಸ್ಯೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ವೈದ್ಯರ ಕೊರತೆ ಸದ್ಯ ಇಲ್ಲ. ಆದರೆ ಸಿಬ್ಬಂದಿ ಕೊರತೆ ಇದೆ. ಸರಕಾರ ಕೌನ್ಸೆಲಿಂಗ್ ಮೂಲಕ ಸಿಬ್ಬಂದಿಯನ್ನು ನೇಮಿಸಬೇಕಿದೆ.ಕುಂದಾಪುರದಿಂದ ಎನ್ ಎಚ್ ಎಮ್ ಸಿಬ್ಬಂದಿ ಇಲ್ಲಿಗೆ ಒಂದು ದಿನ ಬಂದಿದ್ದರು. ನಂತರ ಅಲ್ಲಿ ಸಮಸ್ಯೆಯಾಗಿ ವಾಪಾಸು ಹೋಗಿದ್ದಾರೆ. ಕೊರತೆ ಇರುವ ಸಿಬ್ಬಂದಿ ನೇಮಕವಾದರೆ 24*7 ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
Kshetra Samachara
16/07/2022 05:33 pm