ಮುಲ್ಕಿ: ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ ಏಕಾಏಕಿ ವಿದ್ಯುತ್ ಕಡಿತವಾಗಿದ್ದು, ಈ ನಡುವೆ ಆಸ್ಪತ್ರೆಯ ಜನರೇಟರ್ ಕೂಡ ಕೆಟ್ಟು ಹೋಗಿದ್ದರಿಂದ ಅವ್ಯವಸ್ಥೆ ಉಂಟಾಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ರೋಗಿಗಳು ಪರದಾಡುವಂತಾಯಿತು ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಜೊತೆ ಪ್ರಶ್ನಿಸಿದಕ್ಕೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಮುಲ್ಕಿ ನಪಂ ಸದಸ್ಯ ಮುನ್ನಾ ಯಾನೆ ಮಹೇಶ ಆರೋಪಿಸಿದ್ದಾರೆ
ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ ಕೆಟ್ಟು ಹೋಗಿದ್ದರಿಂದ ಸಂಜೆ 6 ಗಂಟೆಯಿಂದ 8.25 ವರೆಗೆ ರೋಗಿಗಳು ಹಾಗೂ ಚಿಕಿತ್ಸೆಗೆಂದು ಬಂದ ಪುಟ್ಟ ಮಕ್ಕಳು ಕತ್ತಲಿನಲ್ಲಿ ಸೊಳ್ಳೆ ಕಾಟದಿಂದ ಪರದಾಡುವಂತಾಯಿತು ಎಂದು ಮುನ್ನ ಯಾನೆ ಮಹೇಶ ಬೇಸರ ವ್ಯಕ್ತಪಡಿಸಿದ್ದಾರೆ
ಈ ಸಂದರ್ಭ ಸ್ಥಳಕ್ಕೆ ಧಾವಿಸಿ ಬಂದ ಮುಲ್ಕಿ ನ ಪಂ ಸದಸ್ಯರಾದ ಪುತ್ತುಬಾವ ಯೋಗೀಶ್ ಕೋಟ್ಯಾನ್ ಸಂದೀಪ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಶಿಮಂತೂರು, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ ಮತ್ತಿತರರು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತಿನ ಚಕಮಕಿ ನಡೆದಿದೆ.
ಅವ್ಯವಸ್ಥೆ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿ ಸಂಪರ್ಕಿಸಿದಾಗ ಮೊಬೈಲ್ ಸ್ವಿಚ್ಆಫ್ ಬಂದಿದೆ ಎಂದು ಮುನ್ನಾ ಯಾನೆ ಮಹೇಶ ಆರೋಪಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ಕೊರೊನ ದಿನಗಳಲ್ಲಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಆಸ್ಪತ್ರೆ ಎದುರು ಪ್ರತಿಭಟನೆ ಮಾಡುವುದಾಗಿ ಮುಲ್ಕಿ ನಪಂ ಸದಸ್ಯ ಮುನ್ನಾ ಯಾನೆ ಮಹೇಶ ಎಚ್ಚರಿಸಿದ್ದಾರೆ.
Kshetra Samachara
03/08/2021 11:02 pm