ಉಡುಪಿ: ಮೊದಲೇ ಮಳೆಗೆ ರಸ್ತೆಗಳು ಚಿಂದಿ ಎದ್ದು ಹೋಗಿವೆ. ಈ ಮಧ್ಯೆ ಅಂಬಾಗಿಲು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಾವಿ ರೀತಿಯ ಹೊಂಡ ತೋಡಲಾಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲೂ ಹೊಂಡವೇ? ಈ ವರದಿ ನೋಡಿ....
ನಿಜಕ್ಕೂ ಯಾರು ಈ ಹೊಂಡ ತೋಡಿದರೋ ಗೊತ್ತಿಲ್ಲ. ನ್ಯಾಷನಲ್ ಹೈವೇನಲ್ಲಿ ಇಷ್ಟೊಂದು ಆಳದ ಹೊಂಡ ತೋಡಲು ಸಾಧ್ಯವೇ? ಉಡುಪಿಯ ಅಂಬಾಗಿಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಬೃಹತ್ ಹೊಂಡ ಇದೆ.ನಾಲ್ಕೈದು ರಸ್ತೆ ಕೂಡುವ ಮತ್ತು ನಾಲ್ಕೈದು ಕಡೆಗಳಿಂದ ವಾಹನಗಳು ಸಂಚರಿಸುವ ರಸ್ತೆ ಮಧ್ಯೆಯೇ ಈ ಹೊಂಡ ಅಗೆಯಲಾಗಿದೆ.ಇದು ಆಕ್ಸಿಡೆಂಟ್ ಹಾಟ್ ಸ್ಪಾಟ್ ಬೇರೆ . ನಿತ್ಯ ಅಪಘಾತಗಳು ನಡೆಯುವ ಜಂಕ್ಷನ್ನಲ್ಲಿ ಈ ಹೊಂಡ ಅಪಾಯವನ್ನು ಆಹ್ವಾನಿಸುತ್ತಿದೆ.
ಇದೊಂದು ಪ್ರತಿಮೆ ನಿರ್ಮಾಣಕ್ಕೆ ಅಗೆದ ಗುಂಡಿ ಎನ್ನಲಾಗುತ್ತಿದೆ. ಆದರೆ ಹೊಂಡ ತೋಡಿ ಎರಡು ತಿಂಗಳಾಯಿತು.ಮಳೆಗೆ ಈ ಹೊಂಡ ನೀರಿನಿಂದ ತುಂಬುತ್ತಿದೆ.ಇಲ್ಲಿ ಬೀದಿ ದೀಪ ಬೇರೆ ಇಲ್ಲ. ಸ್ಥಳೀಯರು ಮತ್ತು ದೂರದೂರಿನಿಂದ ಅತ್ತಿಂದಿತ್ತ ಸಂಚರಿಸುವವರು ಇಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟವರು ತಕ್ಷಣ ಈ ಹೊಂಡ ಮುಚ್ಚುವ ಕೆಲಸ ಮಾಡಬೇಕು.ಇಲ್ಲದಿದ್ದಲ್ಲಿ ಇಲ್ಲಿ ದೊಡ್ಡ ಅನಾಹುತ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
Kshetra Samachara
22/07/2022 07:01 pm