ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಹಾಲು ,ಮೊಸರಿಗೂ ಜಿಎಸ್ ಟಿ ಬರೆ: " ಇದೇನಾ ನಿಮ್ಮ ಅಚ್ಚೇ ದಿನ್ ?"

ಉಡುಪಿ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ಕಂಗಾಲಾಗಿದ್ದಾರೆ.ಜನರ ಜೇಬಿಗೆ ಸೋಮವಾರದಿಂದ ಮತ್ತಷ್ಟು ಕತ್ತರಿ ಬೀಳಲಿದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್ಟಿ) ಹಲವು ಬದಲಾವಣೆಗಳ ಕಾರಣದಿಂದ ಮೊಸರು, ಮಜ್ಜಿಗೆಯಿಂದ ಹಿಡಿದು ಆಸ್ಪತ್ರೆ ಕೊಠಡಿ ಬಾಡಿಗೆವರೆಗೆ ಹಲವು ಸರಕು ಸೇವೆಗಳು ದುಬಾರಿಯಾಗಲಿವೆ.

ಇಲ್ಲಿಯವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ಪಡೆದಿದ್ದ ಪ್ಯಾಕ್ - ಮಾಡಲಾದ ಆಹಾರ ಪದಾರ್ಥಗಳಿಗೂಸೋಮವಾರದಿಂದ ಜಿಎಸ್ ಟಿ ಅನ್ವಯವಾಗಲಿದೆ. ಮತ್ತಷ್ಟು ಸರಕು ಮತ್ತು ಸೇವೆಗಳ ಜಿಎಸ್ಟಿಯನ್ನು ಏರಿಕೆ ಮಾಡಲಾಗಿದೆ.

ಈ ಬೆಳವಣಿಗೆಯಿಂದ ಬಡವರು, ಮಧ್ಯಮ ,ಕೆಳಮಧ್ಯಮ ವರ್ಗದ ಜನ ಆಕ್ರೋಶಗೊಂಡಿದ್ದಾರೆ.ಅಚ್ಚೇ ದಿನ್ ಇದೇನಾ? ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Edited By :
PublicNext

PublicNext

19/07/2022 12:39 pm

Cinque Terre

21.46 K

Cinque Terre

5

ಸಂಬಂಧಿತ ಸುದ್ದಿ