ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭೂಕುಸಿತದ ಭೀತಿ ತಪ್ಪಿಸಲು ಕುಲಶೇಖರ ರೈಲ್ವೆಹಳಿ ಬಳಿ ಬೃಹತ್ ತಡೆಗೋಡೆ!

ಮಂಗಳೂರು: ನಗರದ ಕುಲಶೇಖರದಲ್ಲಿರುವ ರೈಲ್ವೆ ಸುರಂಗ ಮಾರ್ಗದ ಬಳಿಯಿರುವ ಅಂಡರ್ ಪಾಸ್ ಬಳಿ ತಡೆಗೋಡೆ ಕಾಮಗಾರಿ ಹಾಗೂ ಅಲ್ಲಿಯೇ ಪಕ್ಕದಲ್ಲಿರುವ ಕೊಂಗೂರು ಮಠ ರಸ್ತೆಯಲ್ಲಿರುವ ರೈಲ್ವೆ ಹಳಿಯ ತಡೆಗೋಡೆ ಕಾಮಗಾರಿ ಸಂಪೂರ್ಣಗೊಂಡಿದೆ.

ಕಳೆದ ಬಾರಿ ನಗರದ ಕುಲಶೇಖರ ಬಳಿ‌ 675 ಮೀ. ಉದ್ದದ ಸುರಂಗ ಮಾರ್ಗ ಹಾಗೂ ಪಕ್ಕದಲ್ಲಿ ರೈಲ್ವೆ ಹಳಿ ನಿರ್ಮಾಣ ಮಾಡಲು ಹಳಿಯ ಬದಿಯಲ್ಲಿನ ಗುಡ್ಡ ಪ್ರದೇಶದ ಬಂಡೆಕಲ್ಲುಗಳನ್ನು ಸಮತಟ್ಟು ಮಾಡಲಾಯಿತು. ಆದರೆ ಆ ಬಳಿಕ ಕುಲಶೇಖರ ಕೊಂಗೂರು ಮಠಕ್ಕೆ ಸಂಪರ್ಕಿಸುವ ಪ್ರದೇಶದಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಸಾಕಷ್ಟು ಮಣ್ಣು ಹಳಿಯ ಮೇಲೆ ಬಿದ್ದ ಪರಿಣಾಮ ರೈಲು ಸಂಚಾರವು ವ್ಯತ್ಯಯವಾಗಿತ್ತು.

ಇದೀಗ ಗುಡ್ಡಕುಸಿತ ಆಗುವ ಪ್ರದೇಶದಲ್ಲಿ ಸುಸಜ್ಜಿತ ರೀತಿಯಲ್ಲಿ ತಡೆಗೋಡೆ ನಿರ್ಮಾಣದ ಕಾರ್ಯ ಭರದಿಂದ ಸಾಗಿದೆ. ಹೊಸ ರೈಲ್ವೆ ಸೇತುವೆ ಹಾಗೂ ರೈಲು ಹಳಿಗಳಿಗೆ ಗುಡ್ಡಕುಸಿತದಿಂದ ಯಾವುದೇ ಸಮಸ್ಯೆಗಳಾಗದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಗುಡ್ಡಕ್ಕೆ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಈ ಬಾರಿ ಮಳೆಗೆ ಯಾವುದೇ ರೀತಿ ಮಣ್ಣು ಕುಸಿತದ ಭೀತಿಯಿಲ್ಲ. ಪರಿಣಾಮ ಈ ಭಾಗದಲ್ಲಿ ರೈಲು ಸಂಚಾರ ಯಾವುದೇ ತಡೆಯಿಲ್ಲದೆ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

10/06/2022 09:44 pm

Cinque Terre

19.12 K

Cinque Terre

0

ಸಂಬಂಧಿತ ಸುದ್ದಿ