ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪ್ರಮುಖ ರಸ್ತೆಯಲ್ಲಿಯೇ ತ್ಯಾಜ್ಯ ಡಂಪ್: 'ಸ್ವಚ್ಛ ಮಂಗಳೂರು'ಗೆ ಕಳಂಕ!

ಮಂಗಳೂರು: 'ಸ್ವಚ್ಛ ಮಂಗಳೂರು' ಎಂಬ ಹೆಗ್ಗಳಿಕೆಗೆ ಪಾತ್ರವಾದ, 'ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ' ಪಡೆದಿದ್ದ ಮಂಗಳೂರು ನಗರದ ಹೃದಯ ಭಾಗದಲ್ಲಿಯೇ ತ್ಯಾಜ್ಯ ಡಂಪ್ ಆಗುತ್ತಿದೆ. ಇದು 'ಸ್ವಚ್ಛ ಮಂಗಳೂರು' ಎಂಬ ಕಲ್ಪನೆಗೆ ಕಳಂಕ ತಂದಿದೆ.

ಮಂಗಳೂರು ನಗರದ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜಿನ ಹಿಂಬದಿಯಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿಯೇ ತ್ಯಾಜ್ಯವನ್ನು ಸುರಿಯಲಾಗಿದೆ. ತ್ಯಾಜ್ಯವಿರುವ ಪ್ಲಾಸ್ಟಿಕ್ ಕಟ್ಟುಗಳ ರಾಶಿಯೇ ಇಲ್ಲಿ ಬಿದ್ದಿದೆ. ವಿಷಾದದ ಸಂಗತಿಯೆಂದರೆ ಸ್ವಚ್ಛ ಭಾರತದ ಸ್ಲೋಗನ್ ಹಾಕಿರುವ ಪಕ್ಕದಲ್ಲಿಯೇ ಈ ತ್ಯಾಜ್ಯ ಡಂಪ್ ಆಗಿದೆ. 'ನಾವು ಸ್ವಚ್ಛ ಭಾರತ ಅಭಿಯಾನವನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡೋಣ - ನಮ್ಮ ಮಂಗಳೂರನ್ನು ಸ್ವಚ್ಛ ನಗರವನ್ನಾಗಿ ಪರಿವರ್ತಿಸೋಣ' ಎಂಬ ತ್ಯಾಜ್ಯದ ಮುಂದಿರುವ ಭಿತ್ತಿ ಬರಹವು ಇಡೀ ತ್ಯಾಜ್ಯರಾಶಿಯನ್ನೇ ಅಣಕಿಸುವಂತಿದೆ‌.

ಮಂಗಳೂರಿನ ರಾಮಕೃಷ್ಣ ಮಿಷನ್ ನಿಂದ ಕೊರೊನಾಕ್ಕಿಂತ ಮೊದಲು ಐದು ವರ್ಷಗಳ ಕಾಲ 'ಸ್ವಚ್ಛ ಮಂಗಳೂರು' ಕಲ್ಪನೆಯ ಮುಖೇನ ಇಡೀ ನಗರವನ್ನೇ ತ್ಯಾಜ್ಯ ಮುಕ್ತವನ್ನಾಗಿಸುವ ದೊಡ್ಡ ಮಟ್ಟದ ಪ್ರಯತ್ನ ನಡೆದಿತ್ತು. ಪ್ರತೀ ರವಿವಾರ ಬೆಳಗ್ಗಿನ ಜಾವ ನಗರದ ತ್ಯಾಜ್ಯ ಡಂಪ್ ಆಗುತ್ತಿರುವ ವಿವಿಧ ಸ್ಥಳಗಳನ್ನು ಗುರುತಿಸಿ ಶುಚಿಗೊಳಿಸುವ ಕಾರ್ಯ ಈ ಮೂಲಕ ನಡೆದಿತ್ತು‌. ಅಲ್ಲದೆ ನಗರ ಸ್ವಚ್ಛ ಮಾಡುವುದರೊಂದಿಗೆ ರಾಮಕೃಷ್ಣ ಮಿಷನ್ ಜನ ಜಾಗೃತಿಯನ್ನೂ ಮಾಡುವ ದೊಡ್ಡ ಮಟ್ಟದ ಪ್ರಯತ್ನವನ್ನು ಯಶಸ್ವಿಯಾಗಿ ನಡೆಸಿತ್ತು.

ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆಯೂ ವ್ಯಕ್ತವಾಗಿತ್ತು. ಆ ಬಳಿಕ ಜನತೆಯಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಭಾರೀ ದೊಡ್ಡ ಮಟ್ಟದ ಪರಿವರ್ತನೆಯೂ ಆಗಿತ್ತು. ಬಹಳಷ್ಟು ಕಡೆಗಳಲ್ಲಿ ಈಗಲೂ ತ್ಯಾಜ್ಯ ಡಂಪ್ ಆಗೋದು ಸಂಪೂರ್ಣ ಸ್ಥಗಿತವಾಗಿದೆ. ಆದರೂ ಇನ್ನೂ ಜನರಲ್ಲಿ ಜಾಗೃತಿ ಮೂಡಬೇಕಿದೆ. ಆದ್ದರಿಂದ ಜಿಲ್ಲಾಡಳಿತ ತ್ಯಾಜ್ಯವನ್ನು ಎಗ್ಗಿಲ್ಲದೆ ಎಸೆಯುವುದಕ್ಕೆ ಕಡಿವಾಣ ಹಾಕುವುದರೊಂದಿಗೆ, ತ್ಯಾಜ್ಯ ಎಸೆಯುವವರ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ.

Edited By : Manjunath H D
Kshetra Samachara

Kshetra Samachara

03/06/2022 10:56 am

Cinque Terre

9.03 K

Cinque Terre

2

ಸಂಬಂಧಿತ ಸುದ್ದಿ