ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ನಾಗರಕಟ್ಟೆ ರಸ್ತೆಯ ಸರ್ಕಾರಿ ಜಾಗದಲ್ಲಿದ್ದ ಕಟ್ಟಡವನ್ನು ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು ಹಾಗೂ ಪುರಸಭೆ ಮುಖ್ಯಾಧಿಕಾರಿ ಇಂದೂ ಎಂ. ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ತೆರವುಗೊಳಿಸಲಾಯಿತು.
122/1ಎ1 ಸರ್ವೇ ನಂಬರಿನ ಸರ್ಕಾರಿ 2.50 ಸೆಂಟ್ಸ್ ಜಾಗದಲ್ಲಿದ್ದ ಕಟ್ಟಡವನ್ನು ಜೆಸಿಬಿ ಮುಖಾಂತರ ತೆರವುಗೊಳಿಸಲಾಯಿತು.
ಪ್ರಾಂತ್ಯ ಗ್ರಾಮದ ಮಾಸ್ತಿಕಟ್ಟೆಯಲ್ಲಿ ಸರ್ವೆ ನಂಬರಿನ 137/2ಂ ರಲ್ಲಿ 0.15 ಸೆಂಟ್ಸ್ ಸರ್ಕಾರಿ ಜಮೀನನ್ನು ಸುಂದರ ಬಿನ್.ಕರಿಯ ಅತಿಕ್ರಮಣ ಮಾಡಿದ್ದು, ಅದನ್ನು ಕೂಡ ತೆರವುಗೊಳಿಸಲಾಯಿತು.
ಗ್ರಾಮ ಕರಣಿಕ ಕಿಶೋರ್ ಕುಮಾರ್, ತಾಲೂಕು ಕಂದಾಯ ನಿರೀಕ್ಷಕ ಪ್ರದೀಪ್, ಪುರಸಭೆ ಕಂದಾಯ ನಿರೀಕ್ಷಕ ಅಶೋಕ್, ಹಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ಕೆ., ಸಿಬ್ಬಂದಿ ಸುದೀಶ್ ಹೆಗ್ಡೆ ಹಾಗೂ ಪೌರಕಾರ್ಮಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
31/01/2022 06:54 pm