ಮುಲ್ಕಿ: ಮುಲ್ಕಿ ತಾಲೂಕು ತಹಶೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಕಿಲ್ಪಾಡಿ ಗ್ರಾಮದ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮುಲ್ಕಿ ತಹಶಿಲ್ದಾರ್ ಕಮಲಮ್ಮ ಮಾತನಾಡಿ ಸರಕಾರದಿಂದ ಗ್ರಾಮೀಣ ಭಾಗದ ಜನತೆಗೆ ಸವಲತ್ತುಗಳನ್ನು ಪಡೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಿಲ್ಪಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರಾದ ವಿಕಾಸ್ ಶೆಟ್ಟಿ, ತಮಯಂತಿ ಶೆಟ್ಟಿಗಾರ್, ಮಮತಾ ಶೆಟ್ಟಿ, ಉಪತಹಶಿಲ್ದಾರ್ ಬಾಲಚಂದ್ರ, ಪಂಚಾಯತ್ ಪಿಡಿಒ ಪೂರ್ಣಿಮಾ, ಆರ್. ಐ. ದಿನೇಶ್ ವಿ ಎ ಆಶ್ರಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಅವಹಾಲುಗಳನ್ನು ಸ್ವೀಕರಿಸಲಾಗುವುದು ಹಾಗೂ ಅಲ್ಲಿಯೇ ಸೂಕ್ತ ಪರಿಹಾರ ಮಾಡಿಕೊಡಲಾಯಿತು. ಸುಮಾರು 20ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
Kshetra Samachara
16/10/2021 02:02 pm