ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೀಸಲು ಕಸಿಯಲು ನಕಲಿ ದಾಖಲೆ ಸೃಷ್ಟಿ: ಮೊಗೇರರ ಪ್ರತಿಭಟನೆ

ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿಯಾದ ಮೊಗೇರ ಸಮುದಾಯದ ಜಾತಿಪ್ರಮಾಣ ಪತ್ರ ಪಡೆದು ನೈಜ ಮೊಗವೀರರ ಸಾಂವಿಧಾನಿಕ ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.

ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಕರ್ನಾಟಕ ರಾಜ್ಯ ಮೊಗೇರ ಸಂಘ ಹಾಗೂ ಮಂಗಳೂರು ತಾಲೂಕು ಪ.ಜಾತಿ,ಪ.ಪಂಗಡಗಳ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯಿತು.

ಪ್ರವರ್ಗ 1ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ನಕಲಿ ದಾಖಲೆ ಸೃಷ್ಟಿಸಿ ನೈಜ ಮೊಗೇರ ಸಮುದಾಯದ ಮೀಸಲಾತಿ ಹಕ್ಕನ್ನು ಕಸಿಯುತ್ತಿದೆ. ಆದ್ದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಸೇವೆಯನ್ನು ಪಡೆದುಕೊಳ್ಳತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Edited By :
Kshetra Samachara

Kshetra Samachara

10/05/2022 04:13 pm

Cinque Terre

8.68 K

Cinque Terre

2

ಸಂಬಂಧಿತ ಸುದ್ದಿ