ಉಡುಪಿ: ಉಡುಪಿಯ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ದುಸ್ಥಿತಿಯಲ್ಲಿದ್ದು, ಮಳೆಗೆ ಮಾಡು ಸೋರುತ್ತಿದೆ. ಈ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಸಕ ಕೆ ರಘುಪತಿ ಭಟ್ ರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯಲ್ಲಿ ಹಳೆಯ ಕಾಲದ ತಿರುವಾಂಕೂರಿನ ರಾಜಮನೆತನದ ರಾಜ ರವಿವರ್ಮ ಬಿಡಿಸಿರುವ ಸರಸ್ವತಿ ದೇವಿಯ ಥೈಲ ಚಿತ್ರ ಕಣ್ಮನ ಸೆಳೆಯುತ್ತದೆ. ಚಿತ್ರಗಳನ್ನು ವೀಕ್ಷಿಸಿ ಬಳಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯರಲ್ಲಿ ಶಾಲೆ ಅಭಿವೃದ್ಧಿ ಕುರಿತು ಶಾಸಕರು ಚರ್ಚಿಸಿದರು. ಶಾಲೆಯಲ್ಲಿ 50 ಮಂದಿ ವಿದ್ಯಾರ್ಥಿಗಳ ದಾಖಲಾತಿ ಇದ್ದು, ಪುರಾತನ ಹಿನ್ನೆಲೆಯ ಈ ಶಾಲೆಯನ್ನು ಕನ್ನಡ ಶಾಲೆಯಾಗಿ ಉಳಿಸಿ ಅಭಿವೃದ್ಧಿ ಪಡಿಸಲು ಶಾಸಕರ ಅನುದಾನದಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ರಘುಪತಿ ಭಟ್ ಶಾಲಾಭಿವೃದ್ಧಿ ಸಮಿತಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎನ್. ಎಚ್ ನಾಗೂರ್ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ, ನಾಗೇಂದ್ರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಡುಪಿ ವಲಯ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸದಸ್ಯರಾದ ಕಪ್ಪೆಟ್ಟು ಪ್ರವೀಣ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
07/08/2021 06:31 pm