ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇತಿಹಾಸದ ಕತೆ ಹೇಳುವ ಬಾರ್ಕೂರಿನ‌ ಪುರಾತನ ಸ್ಮಾರಕಗಳನ್ನು ಸಂರಕ್ಷಿಸುವವರಾರು?

ಬಾರ್ಕೂರು: ಒಂದು ಕಾಲದಲ್ಲಿ ಆಳುಪರ ರಾಜಧಾನಿಯಾಗಿದ್ದು, ನಂತರದಲ್ಲಿ ವಿಜಯನಗರ ಅರಸರ ರಾಜಧಾನಿಯಾಗಿದ್ದ

ಬಾರ್ಕೂರಿನಲ್ಲಿ ೩೬೫ ದೇವಾಲಯಗಳು, ಕೋಟೆ, ಬಸದಿಗಳು, ಶಾಸನಗಳು, ನೀರಾವರಿಗೆ ಸಂಬಂದಪಟ್ಟ ರಚನೆಗಳು, ಟಂಕಸಾಲೆ ಇತ್ತೆಂದು ಇತಿಹಾಸದ ಪುಟಗಳಿಂದ ತಿಳಿಯಬಹುದು.

ಐತಿಹಾಸಿಕ ಕಾಲದಲ್ಲಿ ವಿಜೃಂಭಣೆಯಿಂದ ಮೆರೆಯುತ್ತಿದ್ದ ಬಾರ್ಕೂರು, ಇಂದು ಅಲ್ಲಿರುವ ಐತಿಹಾಸಿಕ ಆಕರಗಳನ್ನು ಉಳಿಸಿಕೊಳುವಲ್ಲಿ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಈ ಪ್ರದೇಶಕ್ಕೆ ಭೇಟಿ‌ ನೀಡಿದರೆ ತಿಳಿಯುತ್ತದೆ‌.

ಇಲ್ಲಿರುವ ದೇವಾಲಯಗಳಲ್ಲಿ ಅನೇಕ‌ ಶಾಸನಗಳು ಹಾಗೂ ಸ್ಮಾರಕ ಶಿಲ್ಪಗಳು‌ ಕಂಡು ಬರುತ್ತವೆ. ಆದರೆ‌ ಇಂದು ಅವುಗಳು ಯಾವ ಪರಿಸ್ಥಿತಿಯಲ್ಲಿ ‌ಇದೆ ಎಂದರೆ,

ಶಾಸನದ ಮೇಲೆ ಶ್ವಾನ ನಿದ್ರಿಸುವಂತಾಗಿದೆ, ಸ್ಮಾರಕ ಶಿಲ್ಪದ ಬಳಿ ಕಸದ ತೊಟ್ಟಿ, ಪೈಂಟಿಂಗ್ ಪರಿಕರಗಳನ್ನು ಇಡುವಂತಾಗಿದೆ.ನಿರ್ವಹಣೆಯ ಕೊರತೆಯಿಂದ ಸೊರಗುತ್ತಿವೆ.

ಪುರಾತತ್ತ್ವ ಇಲಾಖೆಯು ಈ ಪ್ರದೇಶದ ದಾಖಲೆಗಳನ್ನು ‌ಉಳಿಸುವಲ್ಲಿ ಎಷ್ಟು ಸಫಲವಾಗಿದೆ ‌ಎಂದು ತಿಳಿಯಬೇಕಾದರೆ ಖಂಡಿತವಾಗಿಯೂ ಒಮ್ಮೆ ಇಲ್ಲಿಗೆ ಭೇಟಿ‌ ನೀಡಲೇಬೇಕು.

ಇಲಾಖೆಗೆ ಈ ಐತಿಹ್ಯಗಳನ್ನು‌ ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?ಒಂದು ವೇಳೆ ಇಲಾಖೆಗೆ ಇವುಗಳನ್ನು ಸಂರಕ್ಷಣೆ ಸಾಧ್ಯವಾಗದಿದ್ದರೆ ಬೇರೆಯವರಿಗಾದರೂ ನಿರ್ವಹಣೆ ಜವಾಬ್ದಾರಿ ನೀಡಲಿ ಎಂಬುದು ಸ್ಥಳೀಯರ ಅಭಿಪ್ರಾಯ.

ಒಂದು‌ ಪ್ರದೇಶದ ಸ್ಮಾರಕಗಳು, ಶಾಸನಗಳು ಅಲ್ಲಿಯೇ ಉಳಿಯಬೇಕೆಂದು ಹೇಳುತ್ತಾರೆ. ಆದರೆ ಅದಕ್ಕೆ‌ ರಕ್ಷಣೆ ಇಲ್ಲದೆ ಇದ್ದರೂ‌‌ ಒಂದೇ‌‌ ಅಥವಾ ನಾಶವಾದರೂ‌ ಒಂದೇ.

ಎಲ್ಲಿಂದಲೋ‌ ಬರುವವರಿಗೆ ವಿಷಯ ತಿಳಿಸುವ ಮೊದಲು‌ ಸ್ಥಳೀಯ ಜನರಿಗೆ ಅಲ್ಲಿನ‌ ಇತಿಹಾಸವನ್ನು ತಿಳಿಸಿಕೊಡಲು ಒಂದು ಮಾಹಿತಿ ಫಲಕವನ್ನು ಸಹ ಪುರಾತತ್ತ್ವ ‌ಇಲಾಖೆ ಇಲ್ಲಿ ಹಾಕಿಲ್ಲ.

ಹೆಸರಿಗೆ ಮಾತ್ರ ಪುರಾತತ್ತ್ವ ಇಲಾಖೆಗೆ ಒಳಪಟ್ಟಿದೆ ಎಂದು‌ ಹೇಳುತ್ತಾರೆ. ಅಲ್ಲಿರುವ ದೇವಾಲಯಗಳಿಗೆ ಅಥವಾ ಕತ್ತಲೆ ಕೋಣೆ ಬಸದಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವುಗಳ ಬಗ್ಗೆ ವಿವರಣೆ ಕೊಡಲು‌ ಸಹ ಯಾರೂ ಇಲ್ಲ.

ಯಾರಲ್ಲಾದರು ಕೇಳಿದರೆ, ಪುರಾತತ್ತ್ವ ಇಲಾಖೆ ಬರುವಾಗ ಎಲ್ಲಾ ಬರುತ್ತಾರೆ, ಆಮೇಲೆ ಯಾರೂ ಇರುವುದಿಲ್ಲ ಎಂದು ಹೇಳುತ್ತಾರೆ‌‌.

ಈ ಕುರಿತು ಸ್ಥಳೀಯರ ಬಳಿ ಕೇಳಿದರೆ, ಕೆಲವರು ಅಧ್ಯಯನ ಮಾಡಲು ಬರುತ್ತಾರೆ, ಅವರಿಗೆ ಬೇಕಾದದ್ದು ಮಾಡಿಕೊಂಡು ಹೋಗುತ್ತಾರೆ ಅಷ್ಟೇ.ಬಳಿಕ ಅವುಗಳ ಪರಿಸ್ಥಿತಿ ಇನ್ನಷ್ಡು ಹಾಳಾಗುತ್ತದೆ ಬಿಟ್ಟರೆ ಏನೂ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ.

ಪುರಾತತ್ತ್ವ ಇಲಾಖೆ ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಇತಿಹಾಸ ಮತ್ತು ಪುರಾತತ್ತ್ವ ವಿದ್ವಾಂಸರುಗಳು ಹಾಗೂ ಸಂಶೋಧನಾರ್ಥಿಗಳು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ

ಈ ಪ್ರದೇಶದ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲು ಈ ಸ್ಮಾರಕಗಳ ರಕ್ಷಣೆ ಅತ್ಯವಶ್ಯಕವಾಗಿದೆ.

ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಇದನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ ರಾಜ್ ಸರಳೇಬೆಟ್ಟು ಹಾಗೂ ಯೋಗೀಶ್ ರಾಜ್ ಬಂಡಿಮಠ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

21/12/2020 12:45 pm

Cinque Terre

22.26 K

Cinque Terre

2