ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಜಂಕ್ಷನ್ ನಲ್ಲಿ ಕೆರೆ ನಿರ್ಮಾಣ; ಕ್ಷಣ ಕ್ಷಣ ಅಪಘಾತ ಭೀತಿ

ಮುಲ್ಕಿ: ಮಳೆ ಸುರಿದರೆ ಸಾಕು, ರಾ.ಹೆ. 66ರ ಹಳೆಯಂಗಡಿ ಜಂಕ್ಷನ್ ಕೆಸರುಮಯವಾಗುತ್ತದೆ.

ಸದಾ ಬ್ಯುಸಿಯಾಗಿರುವ ಹಳೆಯಂಗಡಿ ಜಂಕ್ಷನ್ ಹೆದ್ದಾರಿ ಬಳಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ವಾಹನ ಸಂಚಾರ ಹಾಗೂ ನಡೆದಾಡಲು ಕೂಡ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಗುರುವಾರ ಭಾರಿ ಮಳೆಯಿಂದ ಹಳೆಯಂಗಡಿ ಜಂಕ್ಷನ್ ಬಳಿ ನೀರು ನಿಂತು ಕೆರೆ ಯಂತಾಗಿದೆ.

ಮಂಗಳೂರಿನಿಂದ ಹಳೆಯಂಗಡಿ ಜಂಕ್ಷನ್ ಮುಖಾಂತರ ಕಟೀಲು- ಕಿನ್ನಿಗೋಳಿ ಕಡೆಗೆ ಅನೇಕ ವಾಹನಗಳು ಸಂಚರಿಸುತ್ತಿದ್ದು, ಅವರಿಗೆ ಪರದಾಟ ತಪ್ಪಿದ್ದಲ್ಲ. "ಈ ಹಿಂದೆ ಹಳೆಯಂಗಡಿ ಜಂಕ್ಷನ್ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಹಲವು ಬಾರಿ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಮಳೆ ಬಂದರೆ ನಿತ್ಯ ಅದೇ ಗೋಳು. ಕಳೆದ ಬಾರಿ ಈ ಬಗ್ಗೆ ಆಕ್ರೋಶಗೊಂಡ ಸಾರ್ವಜನಿಕರು ಇದೇ ಸ್ಥಳದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ಕೂಡ ನಡೆಸಿದ್ದರು" ಎಂದು ಹಳೆಯಂಗಡಿಯ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ತಿಳಿಸಿದ್ದು, ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

11/12/2020 02:59 pm

Cinque Terre

22.32 K

Cinque Terre

0

ಸಂಬಂಧಿತ ಸುದ್ದಿ