ಮಂಗಳೂರು- ಬಹುನಿರೀಕ್ಷಿತ ಗೈಲ್ ನೈಸರ್ಗಿಕ ಅನಿಲ ಮಂಗಳೂರಿಗೆ ನಿಗದಿತ ದಿನದ ಮುಂಚೆಯೇ ಬಂದಿದೆ. ಪ್ರಾಯೋಗಿಕವಾಗಿ ಮೊದಲು ನೈಟ್ರಜನ್ ಅನಿಲ ಕಳುಹಿಸಿ ಯಶಸ್ವಿಯಾದ ನಂತರ ಗೈಲ್ ಗ್ಯಾಸ್ ಕಳುಹಿಸಲಾಗಿದೆ. 35 ಕೆಜಿ ತೂಕದ ವೇಗದಲ್ಲಿ ರವಿವಾರ ಕಳುಹಿಸಲಾಗಿದ್ದು ಇಂದು ಸೋಮವಾರ ಕೂಡ ಪಂಪಿಂಗ್ ಕಾರ್ಯ ಮುಂದುವರೆದಿದೆ.
ಗೈಲ್ ಗ್ಯಾಸ್ ಅಧಿಕಾರಿಗಳು ಮಂಗಳೂರಿನ ವ್ಯಾಪ್ತಿಯಲ್ಲಿ ಪೈಪ್ ಲೈನ್ ವೆಂಟ್, ಜಾಯಿಂಟ್ ಇತ್ಯಾದಿಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿದ್ದಾರೆ. ಪೂರ್ಣ ಚಾರ್ಜ್ ಆಗಿದ್ದನ್ನು ಖಚಿತ ಪಡಿಸಿದ ನಂತರ ಗ್ಯಾಸ್ ಬಂದಿದೆ. ಸೋಮವಾರ ಬೆಳಿಗ್ಗೆ 8ರಿಂದ 10 ಕೆಜಿ ವೇಗದಲ್ಲಿ ಗ್ಯಾಸ್ ಬಂದಿದೆ.
ಈ ಅನಿಲವನ್ನು ಎಂ ಸಿ ಎಫ್ ಕಂಪನಿಗೆ ಮೊದಲು ನೀಡಲಾಗಿದ್ದು ನಾಫ್ತಾದ ಬದಲಾಗಿ ಇದರಿಂದಲೇ ಅಮೋನಿಯಾ ಉತ್ಪಾದನೆ ಆಗಲಿದೆ. ಡಿಸೆಂಬರ್ ಅಂತ್ಯಕ್ಕೆ ಒಎಂಪಿಎಲ್, ಬರುವ ಜನವರಿಯಲ್ಲಿ ಎಂಆರ್ ಪಿಎಲ್, ಹಾಗೂ ಉಡುಪಿಯ ಅದಾನಿ ಗ್ಯಾಸ್ ಕಂಪನಿಗೆ ಫೆಬ್ರುವರಿ ಅಂತ್ಯಕ್ಕೆ ಗೈಲ್ ಗ್ಯಾಸ್ ಪೂರೈಕೆಯಾಗುವ ಸಾಧ್ಯತೆ ಇದೆ.
Kshetra Samachara
23/11/2020 02:48 pm