ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾದರೂ ಮಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್ ದಟ್ಟಣೆ ಕಂಡು ಬರುತ್ತಿದೆ.
ನಗರದ ಸ್ಟೇಟ್ ಬ್ಯಾಂಕ್ ನಿಂದ ವಾಪಾಸ್ ತೆರಳುವ ವಾಹನಗಳೆಲ್ಲವೂ ಕೆಎಸ್ ರಾವ್ ರೋಡ್ ಆಗಿ ಬರುತ್ತಿದ್ದು ಜನ ಪರದಾಡುವಂತಾಗಿದೆ. ನಗರದ ಪ್ರಮುಖ ಬೀದಿಯಲ್ಲೇ ಭಾರೀ ಟ್ರಾಫಿಕ್ ದಟ್ಟಣೆ ಕಂಡುಬರುತ್ತಿರುವ ಹಿನ್ನೆಲೆ ನಗರದಾದ್ಯಂತ ವಾಹನ ಸಂಚಾರಕ್ಕೆ ತೊಡಕಾಗಿದೆ.
ಸ್ಮಾರ್ಟ್ ಸಿಟಿ ಹೆಸರಲ್ಲಿ ಎರಡು ವರುಷಗಳ ನಂತರ ಎದ್ನೋ ಬಿದ್ನೋ ಅಂತಾ ಕಾಮಗಾರಿ ಆರಂಭಿಸಿದ ಪರಿಣಾಮ ಇಂತಹ ಎಫೆಕ್ಟ್ ನಗರದಾದ್ಯಂತ ಕಾಣುತ್ತಿದೆ. ನಗರದ ಹಂಪನಕಟ್ಟೆ, ಮಿಲಾಗ್ರಿಸ್, ಕ್ಲಾಕ್ ಟವರ್ ಗಳ ಬಳಿ ರಸ್ತೆಗಳನ್ನು ಅಗೆದು ಹಾಕಿದ್ದು, ಜನ ಇದೇನಾ ನಿಮ್ಮ ಸ್ಮಾರ್ಟ್ ಸಿಟಿ ಅಂತಾ ಹಣೆ ಮೇಲೆ ಚಚ್ಚಿಕೊಳ್ಳುವಂತಾಗಿದೆ.
Kshetra Samachara
09/11/2020 07:51 pm