ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದಶ ಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಸಚಿವ ಉಮೇಶ್ ಕತ್ತಿ ಚಾಲನೆ

ಮಂಗಳೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕುಂದಾಪುರ ಅರಣ್ಯ ಇಲಾಖೆ ವಿಭಾಗ ಹಾಗೂ ವೇಣೂರು ಅರಣ್ಯ ವಲಯ ಆಶ್ರಯದಲ್ಲಿ ಸಾಮಾಜಿಕ ಅರಣ್ಯೀಕರಣ ದಶ ಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ಎರ್ಮೊಡಿ ಅರಣ್ಯ ಪ್ರದೇಶದಲ್ಲಿ ನಡೆಯಿತು.

ಗಿಡಕ್ಕೆ ನೀರುಣಿಸಿ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಚಾಲನೆ ನೀಡಿದರು. ವೃಕ್ಷ ಬಂಧನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಸಚಿವ ಉಮೇಶ್ ಕತ್ತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು 15 ಎಕರೆ ಜಮೀನನ್ನು ಪ್ರಾಣಿ ಪಕ್ಷಿಗಳಿಗಾಗಿ ಮೀಸಲಿಟ್ಟ

ರಾಮಕೃಷ್ಣ ಭಟ್ ಪೆರಿಂಜೆ ಹಾಗೂ ಇನ್ನೋರ್ವ ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಅರಣ್ಯ ಇಲಾಖೆಯ ಅಧಿಕಾರಿಗಳು ಭಾವವಹಿಸಿದ್ದರು.

Edited By :
Kshetra Samachara

Kshetra Samachara

23/06/2022 02:56 pm

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ