ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಜೆಸಿಐ ವತಿಯಿಂದ ಕೋವಿಡ್ ಜಾಗೃತಿ ಪೋಸ್ಟರ್, ಬೀಜದುಂಡೆ ಅಭಿಯಾನ

ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್‌ನಿಂದ ಕೋವಿಡ್ ಜಾಗೃತಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಬಿಡುಗಡೆ ನೆರವೇರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳದೆ, ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಮೂಲಕ ಕೋವಿಡ್ ಹರಡದಂತೆ ಜಾಗೃತಿ ವಹಿಸಬೇಕು ಎಂಬ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.

ನಂತರ ಕಲ್ಲಬೆಟ್ಟು ಸಮೀಪದ ಸೀತಾರಾಮ ಆಚಾರ್ಯರ ನಿವಾಸದಲ್ಲಿ ಗೇರುಬೀಜ, ಹಲಸಿನ ಬೀಜ, ಅಡಿಕೆಯನ್ನು ಮಣ್ಣು ಹಾಗೂ ಗೊಬ್ಬರಗಳಿಂದ ಬೆರೆಸಿ ಬೀಜದುಂಡೆ ಅಭಿಯಾನ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಜೆಸಿ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ, ಮಾಜಿ ಅಧ್ಯಕ್ಷೆ ಸಂಗೀತ ಎಂ ಪ್ರಭು, ಸದಸ್ಯರಾದ ಸುನಿಲ್, ಮಲ್ಲಿಕಾ, ಮಹಿಳಾ ಜೇಸಿ ಅಧ್ಯಕ್ಷೆ ಮಮತ, ಜೆಜೆಸಿ ಅಧ್ಯಕ್ಷ ಸಾತ್ವಿಕ್ಆಚಾರ್ಯ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

14/05/2022 04:57 pm

Cinque Terre

4.95 K

Cinque Terre

0