ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ಸುನಿಲ್ದಾಣದ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಗಳು ಹುಲ್ಲಿನ ಪೊದೆಯಿಂದ ತುಂಬಿಹೋಗಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಮುಲ್ಕಿ ಬಸ್ ನಿಲ್ದಾಣದ ಜನನಿಬಿಡ ಪ್ರದೇಶವಾದ ನರ್ಸಿಂಗ್ ಹೋಮ್ ಪಕ್ಕದ ರಿಕ್ಷಾ ನಿಲ್ದಾಣದ ಬಳಿಯಲ್ಲಿ ಹಾಗೂ ಮಂಗಳೂರು ಕಡೆಗೆ ಹೋಗುವ ಇನ್ನೊಂದು ಬಸ್ಸುನಿಲ್ದಾಣದ ಮಾರುದ್ದ ದೂರದ ರಾಷ್ಟ್ರೀಯ ಹೆದ್ದಾರಿ ಸರ್ವಿಸು ರಸ್ತೆಯ ಬಳಿ ಬೃಹದಾಕಾರದ ಟ್ರಾನ್ಸ್ಫಾರ್ಮರ್ ಅಳವಡಿಸಿದ್ದು ಹುಲ್ಲಿನ ಪೊದೆಗಳಿಂದ ತುಂಬಿಹೋಗಿ ಅಪಾಯಕಾರಿಯಾಗಿದೆ ಟ್ರಾನ್ಸ್ಫಾರ್ಮರ್ ಬದಿಯಲ್ಲಿ ಜನರು ನಡೆದುಕೊಂಡು ಹೋಗುತ್ತಿದ್ದು ವಿದ್ಯುತ್ ಅವಘಡ ಸಂಭವಿಸಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಕೂಡಲೇ ಟ್ರಾನ್ಸ್ಫಾರ್ಮರ್ ಬದಿಯ ಹುಲ್ಲಿನ ಪೊದೆಗಳನ್ನು ತೆರವುಗೊಳಿಸಿ ತಡೆಬೇಲಿ ಅಳವಡಿಸಬೇಕೆಂದು ಸ್ಥಳೀಯ ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸರ್ವಿಸ್ ರಸ್ತೆ ಕುಂಟುತ್ತಾ ಸಾಗುತ್ತಿದ್ದು ಸೂಕ್ತ ಚರಂಡಿ ಇಲ್ಲದೆ ಹೆದ್ದಾರಿ ಅವ್ಯವಸ್ಥೆ ಯಿಂದ ಅನೇಕ ಅಪಘಾತಗಳು ಸಂಭವಿಸಿದೆ. ಅಪಘಾತಗಳನ್ನು ನಿಯಂತ್ರಿಸಲು ಅಳವಡಿಸಿರುವ ಬ್ಯಾರಿಕೇಡರು ಗಳು ತುಕ್ಕು ಹಿಡಿದಿದ್ದು ಹೆದ್ದಾರಿ ಡಿವೈಡರ್ ಬಳಿ ಬಿದ್ದು ಅಪಾಯಕಾರಿಯಾಗಿದೆ. ಬ್ಯಾರಿ ಕೇಡರ್ ನಲ್ಲಿ ಹುಲ್ಲಿನ ಪೊದೆಗಳು ಬೆಳೆದಿದ್ದು ದಾನಿಗಳು ಕೊಟ್ಟ ಬ್ಯಾರಿಕೇಡ ರುಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
31/10/2020 03:41 pm