ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ ತಾಲೂಕು ಪಂಚಾಯಿತಿ ಚೊಚ್ಚಲ ಗ್ರಾಮಸಭೆ: 28 ಅಧಿಕಾರಿಗಳು ಗೈರು

ಮೂಡುಬಿದಿರೆ: ಇಲ್ಲಿನ ತಾಲೂಕು ಪಂಚಾಯಿತಿಯ ಪ್ರಥಮ ಸಾಮಾನ್ಯ ಸಭೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆಯಿತು.

ವಿವಿಧ ಇಲಾಖೆಯ 10 ಮಂದಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, 28 ಮಂದಿ ಅಧಿಕಾರಿಗಳು ಗೈರಾಗಿದ್ದರು. ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಶಾಸಕರು ಸೂಚಿಸಿದರು.

ತಾಲೂಕು ಕಾರ್ಯನಿರ್ವಹಣಾಧಿಕಾರಿ ದಯಾವತಿ ಅವರು, ಮೂಡುಬಿದಿರೆ ತಾಲೂಕಿಗೆ ಮಂಜೂರಾದ ಅನುದಾನ, ತಾಲೂಕು ಕಚೇರಿಗೆ ಸ್ವಂತ ನಿವೇಶನ, ಅನುದಾನ ಹಂಚಿಕೆ, ವಿವಿಧ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳ ವಿವರ, ತಾಲೂಕು ಪಂಚಾಯಿತಿ ಕಾರ್ಯವೈಖರಿ ಸಹಿತ ವಿವಿಧ ವಿಚಾರಗಳ ವಿವರ ನೀಡಿದರು.

ತಾಲೂಕು ಪಂಚಾಯತಿ ಅಧ್ಯಕ್ಷೆ ರೇಖಾ ಸಾಲ್ಯಾನ್ ,ಉಪಾಧ್ಯಕ್ಷ ಸಂತೋಷ್ ಬೆಳುವಾಯಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಕೆ.ಪಿ ಸುಜಾತ, ತಾಲೂಕು ಪಂಚಾಯತಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

27/10/2020 05:03 pm

Cinque Terre

9.86 K

Cinque Terre

1

ಸಂಬಂಧಿತ ಸುದ್ದಿ