ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ನೇರಳಕಟ್ಟೆಗೆ ಸರ್ಕಲ್ ಯಾಕೆ ಬೇಕು?

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ನೇರಳಕಟ್ಟೆ ಗ್ರಾಮದ ಜನತೆಯ ಕೂಗು ಶಾಸಕ ಸುಕುಮಾರ ಶೆಟ್ಟಿಯ ಮನೆ ಬಾಗಿಲು ತಟ್ಟುತ್ತಿದೆ. ಕೊಲ್ಲೂರಿನಿಂದ ವಿರಾಜಪೇಟೆ ಮಾರ್ಗವಾದ ರಾಜ್ಯ ಹೆದ್ದಾರಿಯಲ್ಲಿ ನೇರಳಕಟ್ಟೆಗೆ ಬಹುದಿನಗಳಿಂದ ಸರ್ಕಲ್ ಬೇಡಿಕೆ ಇತ್ತು.

ಆದರೆ, ಈ ಬೇಡಿಕೆ ಈಡೇರದೇ ಇದ್ದಾಗ, ಇದೀಗ ನೇರಳಕಟ್ಟೆ ಜನತೆ ಶಾಸಕರಿಗೆ ಮನವಿ ಮಾಡಿದ್ದಾರೆ. ಸುತ್ತ ಹತ್ತು ಹಳ್ಳಿಗಳನ್ನು ಕೇಂದ್ರೀಕರಿಸುವ ನೇರಳಕಟ್ಟೆ ಪೇಟೆಗೆ ಸರ್ಕಲ್ ಮುಖ್ಯವಾಗಿ ಬೇಕು.

ನೆಂಪು, ಅಂಪಾರು, ಶಂಕರನಾರಾಯಣ, ಹೆಮ್ಮಾಡಿಗೆ ಸರ್ಕಲ್ ಈಗಾಗಲೇ ಆಗಿದೆ. ಆದರೆ, ನೇರಳಕಟ್ಟೆಗೆ ಮಲತಾಯಿ ಧೋರಣೆ ಬೇಡ. ನೇರಳಕಟ್ಟೆ ಪೇಟೆಗೆ ಆಜ್ರಿ ,ಗುಡ್ರಿ , ಕೆಂಚನೂರು, ವಾಲ್ತೂರು,ನೀರ್ ಕೊಡ್ಲು ,ಅಸೋಡಿ ಮಾವಿನ ಗೋಳಿ ಇನ್ನೂ ಅನೇಕ ಹಳ್ಳಿಗಳಿಂದ ಜನ ಈ ಪೇಟೆ ಅವಲಂಬಿಸಿಕೊಂಡಿದ್ದಾರೆ.

ಅಲ್ಲದೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗುವ ರಾಜ್ಯಹೆದ್ದಾರಿ ಆಗಿರುವುದರಿಂದ ಪ್ರವಾಸಿಗರು ಹೆಚ್ಚಾಗಿ ಇದೇ ಮಾರ್ಗವಾಗಿ ಬರುತ್ತಾರೆ.

ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ ದರುಶನಕ್ಕೆ ಹೋಗುವ ಯಾತ್ರಿಕರು ಕೂಡ ಕೊಲ್ಲೂರು ಮಾರ್ಗವಾಗಿ ದೇವಿ ದರ್ಶನ ಮಾಡಿಕೊಂಡು ಇದೇ ಮಾರ್ಗವಾಗಿ ಹೋಗಬೇಕು.

ಆ ನಿಟ್ಟಿನಲ್ಲಿ ನೇರಳಕಟ್ಟೆ ಸರ್ಕಲ್ ಅಭಿವೃದ್ಧಿಯ ಅತಿ ಮುಖ್ಯ ಎಂಬುದು ಸ್ಥಳೀಯರ ಒತ್ತಾಯ.

Edited By : Manjunath H D
Kshetra Samachara

Kshetra Samachara

16/10/2020 08:37 pm

Cinque Terre

23.48 K

Cinque Terre

3

ಸಂಬಂಧಿತ ಸುದ್ದಿ