ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ನಾಡಗೀತೆಗೆ ಮಕ್ಕಳೊಂದಿಗೆ ಆಕಳಿನ ಗೌರವಾರ್ಪಣೆ!

ಕುಂದಾಪುರ: ನಾಡಗೀತೆಗೆ ಗೌರವ ನೀಡುತ್ತಿರುವ ಹಸುವಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಕುಂದಾಪುರ ತಾಲೂಕಿನ ಮಾವಿನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈ ದೃಶ್ಯ ಕಾಣ ಸಿಕ್ಕಿದೆ.

ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಶಾಲೆಯಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ನಾಡಗೀತೆ ಹಾಡುತ್ತಿರುವ ಸಂದರ್ಭ ಅಲ್ಲಿಗೆ ಬಿಳಿ ವರ್ಣದ ಹಸುವೂ ಆಗಮಿಸಿದೆ.

ಆಕಳು ಆಶ್ಚರ್ಯ ಎಂಬಂತೆ ನಾಡಗೀತೆ ಕೇಳಿ ಅಲ್ಲೇ ನಿಂತು ಬಿಡುತ್ತದೆ.ನಾಡಗೀತೆ ಮುಗಿಯುವವರೆಗೂ ಅಲುಗಾಡದೆ ನಿಂತಲ್ಲೇ ನಿಂತಿದ್ದ ಹಸುವಿನ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Manjunath H D
Kshetra Samachara

Kshetra Samachara

02/12/2021 01:12 pm

Cinque Terre

6.81 K

Cinque Terre

1