ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಶಿರೂರು ಅಳಿವೆಗದ್ದೆ ಮೇಸ್ತ ಕುಟುಂಬ ಮನೆ; ಗಣಪತಿ ತಯಾರಿಯಲ್ಲಿ ಶತಮಾನೋತ್ಸವದ ಹಿರಿಮೆ!

ಕುಂದಾಪುರ: ಅಲ್ಲಿ ಈ ವರ್ಷ ಶತಮಾನೋತ್ಸವ ಸಂಭ್ರಮ… ಹಾಗಂತ ಇದು ಯಾವುದೋ ಸಂಸ್ಥೆಯಲ್ಲ. ಕಚೇರಿಯಲ್ಲ!

ಇಲ್ಲೊಂದು ಕುಟುಂಬ ಮುತ್ತಜ್ಜನ ಕಾಲದಿಂದಲೂ ನಡೆದುಕೊಂಡು ಬಂದ ಶ್ರೀ ಗಣೇಶನ ಮೂರ್ತಿ ತಯಾರಿಯಲ್ಲಿ ನಿರಂತರವಾಗಿ ಸಾಗಿ ಬರುತ್ತಾ ಶತಮಾನೋತ್ಸವ ಆಚರಿಸುತ್ತಿದೆ!

ಅದು ಶಿರೂರಿನ ಅಳಿವೆಗದ್ದೆ ಎಂಬಲ್ಲಿನ ಮೇಸ್ತ ಕುಟುಂಬದ ಮನೆ. ಪಬ್ಲಿಕ್ ನೆಕ್ಸ್ಟ್ ಆ ಮನೆಗೆ ಹೋದಾಗ ಸಂಜೆಯಾಗಿತ್ತು. ಗಣೇಶೋತ್ಸವಕ್ಕೆ ಎರಡು ದಿನ ಬಾಕಿ ಇರುವಂತೆ ಅವರ ಮನೆಯಲ್ಲಿ ಸಡಗರ ಮನೆ ಮಾಡಿತ್ತು. ಬಣ್ಣ ಬಣ್ಣದ ಗಣಪತಿ ಸಮೂಹ ಅಲ್ಲಿ ಆಹ್ವಾನಿತರನ್ನು ಸ್ವಾಗತಿಸುತ್ತಿದ್ದರೆ, ಯುವಕರ ತಂಡ ಗಣೇಶನನ್ನು ಸಜ್ಜುಗೊಳಿಸುತ್ತಿದ್ದರು.

ಬಾಲಗಂಗಾಧರ ನಾಥ ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಗಣೇಶೋತ್ಸವವನ್ನು ಜನ ಸೇರಿಸುವ ನೆಪದಲ್ಲಿ ಆರಂಭಿಸಿದ ಬಳಿಕ ಅಂದರೆ ನೂರು ವರ್ಷಗಳ ಹಿಂದೆಯೇ ಅಳಿವೆಗದ್ದೆಯಲ್ಲಿ ಪ್ರತೀ ಮನೆಯಲ್ಲಿಯೂ ಗಣೇಶನ ಪ್ರತಿಮೆ ಮಾಡಿ ಅವರ ಮನೆಗಳಲ್ಲಿಯೇ ಗಣೇಶನ ಪೂಜೆ ಮಾಡಿ ವಿಸರ್ಜನೆ ಮಾಡುತ್ತಿದ್ದರು!

ಇಲ್ಲಿನ ರಾಜು ಮೇಸ್ತರ ಮನೆಯಲ್ಲಿಯೂ ಗಣೇಶನನ್ನು ಸಿದ್ಧಗೊಳಿಸುತ್ತಿದ್ದರು. ಬರಬರುತ್ತಾ ಎಲ್ಲರ ಮನೆಗಳಲ್ಲಿ ಗಣೇಶ ಮೂರ್ತಿ ನಿರ್ಮಾಣ ಸ್ಥಗಿತಗೊಂಡಿತು. ಆದರೆ, ರಾಜು ಮೇಸ್ತರ ಮನೆಯಲ್ಲಿ ಗಣಪತಿ ನಿರ್ಮಾಣ ಕೈಂಕರ್ಯ ಹಾಗೆಯೇ ಮುಂದುವರೆಯಿತು.

ರಾಜು ಮೇಸ್ತರ ಬಳಿಕ ಅವರ ಮಕ್ಕಳು, ಮೊಮ್ಮಕ್ಕಳು ಹೀಗೆ ಶತಮಾನದಿಂದ ಗಣಪತಿ ಮೂರ್ತಿ ನಿರ್ಮಾಣ ಮುಂದುವರೆಯುತ್ತಲೇ ಇದೆ. ಸುತ್ತಮುತ್ತಲಿನ ಭಕ್ತರು ಇಲ್ಲಿ ಗಣೇಶನನ್ನು ತಯಾರಿಗೊಳಿಸಿ ಉತ್ಸವಕ್ಕೆ ಕೊಂಡೊಯ್ಯುತ್ತಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುವ ಸಿದ್ಧತೆಯಲ್ಲಿದೆ ರಾಜು ಮೇಸ್ತರ ಮೊಮ್ಮಕ್ಕಳ ಯೋಚನೆ.

- ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ

Edited By :
PublicNext

PublicNext

29/08/2022 07:29 pm

Cinque Terre

55.89 K

Cinque Terre

0

ಸಂಬಂಧಿತ ಸುದ್ದಿ