ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 65 ರಲ್ಲಿ ಕಾಲೇಜು, 75ರ ಇಳಿ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ!

ವರದಿ: ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

ಉಡುಪಿ; ಹುಟ್ಟಿನಿಂದ ಸಾಯೋತನಕ ಕಲಿಯೋದು ಇದ್ದೇ ಇದೆ. ಸಾಧನೆಗೆ ವಯಸ್ಸಿನ ಹಂಗಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಸ್ಟೋರಿ. 75ರ ಬದುಕಿನ ಮುಸ್ಸಂಜೆ ಹೊತ್ತಲ್ಲಿ ಏನ್ ಮಾಡೋಕೆ ಸಾಧ್ಯ ಎನ್ನುವವರಿಗೆ ಡಾಕ್ಟರೇಟ್ ಪದವಿ ಕೂಡ ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ, ಉಡುಪಿಯ ಛಲಗಾರ್ತಿ ಮಹಿಳೆ.

ವಯಸ್ಸು 50 ದಾಟಿದ್ರೆ ಸಾಕು, ಇನ್ನು ನನ್ನಿಂದ ಏನ್ ಮಾಡೋಕೂ ಆಗಲ್ಲಪ್ಪ. ಆರಾಮವಾಗಿ ಇದ್ದು ಬಿಡುತ್ತೇನೆ ಅನ್ನುವವರೇ ಹೆಚ್ಚು, ಆದ್ರೆ 75 ರ ವಯಸ್ಸಿನ ಈ ಮಹಿಳೆ, ಛಲದಿಂದ ಓದಿ ಈ ವಯಸ್ಸಿನಲ್ಲೂ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ, ಇವ್ರೇ ನೋಡಿ 75ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪಡೆದು ಸುದ್ದಿಯಲ್ಲಿರುವ ಮಹಿಳೆ, ಉಡುಪಿಯ ಕನ್ನರ್ಪಾಡಿ ನಿವಾಸಿ ಉಷಾ ಚಡಗ.

ಸುಮಾರು 10 ವರ್ಷಗಳ ಹಿಂದೆ, ತನ್ನ ನಿವೃತ್ತ ಜೀವನದಲ್ಲಿ ಉಡುಪಿಯ ಸಂಸ್ಕ್ರತ ಕಾಲೇಜಿನ ವೇದಾಂತ ವಿಭಾಗಕ್ಕೆ ಸೇರಿ ಎಂಟು ವರ್ಷ ಕಾಲೇಜಿಗೆ ಹೋಗಿ ವೇದಾಂತ ಪಾಸ್ ಮಾಡಿದ್ರು. ನಂತರ ಮೈಸೂರು ಮುಕ್ತ ವಿವಿಯಲ್ಲಿ ಎಂಎ ಪರೀಕ್ಷೆ ಪಡೆದು ರಾಜ್ಯಕ್ಕೇ ನಾಲ್ಕನೇ ಶ್ರೇಣಿ ಪಡೆದರು. ಬಳಿಕ ಡಾಕ್ಟರೇಟ್ ಪದವಿ ಕನಸು ಕಂಡು, ತನ್ನ ಕನಸನ್ನು ವಿದ್ವಾಂಸ ದಿ. ಡಾ. ಬನ್ನಂಜೆ ಗೋವಿಂದಾಚಾರ್ಯರ ಬಳಿ ಹಂಚಿಕೊಳ್ಳುತ್ತಾರೆ. ಆಚಾರ್ಯರು ಇವರಿಗೆ ಮಾರ್ಗದರ್ಶನ ಮಾಡ್ತಾರೆ. ಕಟೀಲು ಶ್ರೀ ದುರ್ಗಾ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನೋಂದಣಿ ಮಾಡಿ, ಡಾ. ಪದ್ಮನಾಭ ಮರಾಠೆ ಅವರ ಮಾರ್ಗದರ್ಶನದಲ್ಲಿ ಕ್ರಿಟಿಕಲ್ ಅನಾಲಿಸಸ್ ಆಫ್ ಮಧ್ವಾಚಾರ್ಯಾಸ್ ಯೂನಿಕ್ ಡಾಕ್ಟ್ರಿನ್ ಆಫ್ ಜೀವ ಸ್ವಭಾವ ವಾದ ಆ್ಯಂಡ್ ಸರ್ವ ಶಬ್ದ ವಾಚ್ಯತ್ವ ಎನ್ನುವ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿ.ವಿ ಡಾಕ್ಟರೇಟ್ ಪದವಿ ನೀಡಿದೆ.

ಉಷಾ ಚಡಗ ಅವರ ಈ ಸಾಧನೆಗೆ ಪತಿ ರಾಮಕೃಷ್ಣ ಅವರೂ ಸಾಥ್ ನೀಡಿದ್ದಾರೆ.. ರಾಮಕೃಷ್ಣ ಅವರು ಕೂಡ ನಿವೃತ್ತ ಜೀವನದಲ್ಲಿ ಪತ್ನಿ ಓದಿಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ. ಪತ್ನಿ ಡಾಕ್ಟರೇಟ್ ಪದವಿ ಪಡೆದ ಕ್ಷಣವನ್ನು ಸಂಭ್ರಮಿಸಿದ್ದಾರೆ. ಪತ್ನಿ ಕಲಿಕೆ ಮಾತ್ರ ಅಲ್ಲ ,ಯಾವುದೇ ವಿಷಯದಲ್ಲೂ ಹಠ ಹಿಡಿದು ಸಾಧಿಸುವ ಸ್ವಭಾವದವರು ಅಂತಾರೆ ಪತಿ.

ಒಟ್ಟಿನಲ್ಲಿ ವಯಸ್ಸಾಯ್ತು, ಅಂತ ನೆಪ ಹೇಳಿಕೊಂಡು ಕಾಲ ಕಳೆಯುವವರ ಮಧ್ಯೆ ಉಷಾ ಚಡಗ ಅವರ ಸಾಧನೆ ಮೆಚ್ಚಲೇಬೇಕು. ಸದ್ಯ ಉಷಾ ಅವರ ಸಾಧನೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ಡಾ. ಉಷಾ ಚಡಗ ಅವರ ಸಾಧನೆ ಎಲ್ಲರಿಗೂ ಸ್ಪೂರ್ತಿ ಆಗಲಿ ಅನ್ನೋದೆ ನಮ್ಮ ಆಶಯ.

Edited By : Nagesh Gaonkar
PublicNext

PublicNext

27/04/2022 04:34 pm

Cinque Terre

48.66 K

Cinque Terre

4

ಸಂಬಂಧಿತ ಸುದ್ದಿ