ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾ.. ಹಾ.. ಬಿಡಬ್ಯಾಡ.. ಗುದ್ದು

ಧಾರವಾಡ: ಟಗರುಗಳ ಅಬ್ಬರದ ಕಾಳಗ.. ರಂಗೇರಿರುವ ಅಖಾಡ.. ಆ ಅಖಾಡದಲ್ಲಿ ಗೆಲವು ನಂದೇ ಎಂದು ಗುದ್ದಾಡುತ್ತಿರುವ ಟಗರುಗಳು. ಡಿಕ್ಕಿ ಹೊಡೆಯುತ್ತಾ ಎದುರಾಳಿಯನ್ನು ಮಣ್ಣು ಮುಕ್ಕಿಸಲು ಹೋರಾಟ.. ಕೊಬ್ಬಿದ ಟಗರುಗಳ ಅಬ್ಬರದ ಕಾಳಗ ಕಂಡು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿರುವ ಪ್ರೇಕ್ಷಕರು.

ಧಾರವಾಡ ತಾಲ್ಲೂಕಿನ ಯಾದವಾಡ ಗ್ರಾಮದ ಹೈಸ್ಕೂಲ್ ಹತ್ತಿರದ ಹೊಲದಲ್ಲಿ ಪ್ರಥಮ ಭಾರಿಗೆ ಭಾರೀ ಟಗರಿನ ಕಾಳಗವನ್ನು ಭಾನುವಾರ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ರಾಣೆಬೆನ್ನೂರು ಸೇರಿದಂತೆ ಧಾರವಾಡ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ 200ಕ್ಕೂ ಹೆಚ್ಚು ಟಗರುಗಳು ಭಾಗಿಯಾಗಿದ್ದವು. ಹಾಲು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಎಂಟು ಹಲ್ಲು ಎಂಬಂತೆ ವಿವಿಧ ವಿಭಾಗಗಳಲ್ಲಿ ನಡೆದ ಟಗರಿನ ಕಾಳಗ ನೋಡುಗರನ್ನು ರೋಮಾಂಚನಗೊಳಿಸಿತು.

ಟಗರುಗಳ ಕೊಂಬುಗಳಿಗೆ ಕೆಂಪು, ಹಳದಿ, ಹಸಿರು ಹೀಗೆ ಬಗೆ ಬಗೆಯ ಬಣ್ಣ ಬಳಿದು, ರಿಬ್ಬನ್ನುಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.

ವರ್ಷಗಟ್ಟಲೇ ಸೋಯಾಬಿನ್, ಹುರುಳಿ ಕಾಳು, ಹಾಲು ಮೊಟ್ಟೆಗಳನ್ನು ತಿನ್ನಿಸಿ ಕೊಬ್ಬಿದ ಟಗರುಗಳನ್ನು ಕರೆತರಲಾಗಿತ್ತು. ಅವುಗಳಿಗೆ ಡಿಕ್ಕಿ ಹೊಡೆಯಲು ಸೂಕ್ತ ತರಬೇತಿ ನೀಡಿ ಪ್ರಶಸ್ತಿ ಗೆದ್ದೆ ಗೆಲ್ಲುವವೆಂಬ ಆತ್ಮವಿಶ್ವಾಸದಿಂದ ಮಾಲೀಕರು ಕರೆದುಕೊಂಡು ಬಂದಿದ್ದರು.

ಬಲ ಭೀಮರಂತೆ ದಷ್ಟಪುಷ್ಟವಾಗಿ ಸೊಕ್ಕಿನಿಂದ ಕೊಬ್ಬಿದ ಟಗರುಗಳ ಕಾಳಗ ಜಗಜಟ್ಟಿಗಳ ಸೆಣಸಾಟವನ್ನು ನೆನಪಿಸುವಂತಿತ್ತು. ಈ ಟಗರು ಕಾಳಗ ನೋಡಲು ಜಿಲ್ಲೆ ಮಾತ್ರವಲ್ಲದೇ ಬೇರೆ ಜಿಲ್ಲೆಗಳಿಂದ ಯುವಕರು, ರೈತರು ಆಗಮಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

03/01/2021 04:42 pm

Cinque Terre

164.34 K

Cinque Terre

4

ಸಂಬಂಧಿತ ಸುದ್ದಿ