ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕೆಎಂಸಿಯಲ್ಲಿ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆ

ಮಣಿಪಾಲ :ಮಣಿಪಾಲ ಕೆಎಂಸಿಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗವು ಮೊದಲ ಬಾರಿಗೆ ಅನ್ನನಾಳದ ರಂದ್ರಕ್ಕೆ ಮತ್ತು ಅನಾಸ್ಟೊಮೊಟಿಕ್ ಸೋರಿಕೆ ಪ್ರಕ್ರಿಯೆಗೆ ಅಪರೂಪದ ಎಂಡೋಸ್ಕೋಪಿ ಸ್ಪಾಂಜ್ (ಎಂಡೋವಾಕ್) ಚಿಕಿತ್ಸೆಯನ್ನು ನಡೆಸಿತು, ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ.

51 ವರ್ಷದ ವ್ಯಕ್ತಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಶಸ್ತ್ರಚಿಕಿತ್ಸೆ ನಡೆಸಿ ನಂತರ ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಲಾಯಿತು. ಒಂದು ವಾರದ ನಂತರ ಅವರಲ್ಲಿ ಅನಾಸ್ಟೊಮೊಟಿಕ್ ಡಿಹಿಸೆನ್ಸ್‌ನೊಂದಿಗೆ ಮೆಡಿಯಾಸ್ಟಿನಿಟಿಸ್ ಅಭಿವೃದ್ಧಿಯಾಯಿತು. ಇದನ್ನು ಸರಿಪಡಿಸಲು ವೈದ್ಯರು ಮತ್ತೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯ ಬಗ್ಗೆ ಆಲೋಚಿಸಿದರು. ಆದರೆ ರೋಗಿಯ ಸಾಮಾನ್ಯ ಸ್ಥಿತಿಯು ಕಳಪೆಯಾಗಿ ಮತ್ತೊಂದು ಶಸ್ತ್ರಚಿಕಿತ್ಸೆ ಕಷ್ಟವಾಗಿತ್ತು.ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಶಿರನ್ ಶೆಟ್ಟಿ ಮತ್ತು ಡಾ ಬಾಲಾಜಿ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ ನವೀನ ಕುಮಾರ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕ, ಡಾ ಜೋಸೆಫ್ ಥಾಮಸ್ ವೈದ್ಯರ ತಂಡವು ಎಂಡೋಸ್ಪಾಂಜ್ / ವ್ಯಾಕ್ಯೂಮ್ ಥೆರಪಿ ಎಂಬ ನವೀನ ಚಿಕಿತ್ಸೆಗೆ ಹೋಗಲು ನಿರ್ಧರಿಸಿದರು. ಇಲ್ಲಿ ಎಂಡೋಸ್ಕೋಪಿಯ ಮೂಲಕ ಎಂಡೋಸ್ಕೋಪಿ ಮೂಲಕ ಸ್ಪಾಂಜ್ ಅನ್ನು ಮೆಡಿಯಾಸ್ಟಿನಮ್ ಕುಳಿಯಲ್ಲಿ ಇರಿಸಲಾಯಿತು, ಇದು ನೈಸರ್ಗಿಕವಾಗಿ ಮತ್ತು ಯಾವುದೇ ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ದೋಷವನ್ನು ಮುಚ್ಚಲು ಸಹಾಯ ಮಾಡಿತು.

ಮೂರು ವಾರಗಳ ನಂತರ ರೋಗಿಯು ನೇರವಾಗಿ ಬಾಯಿಯ ಮೂಲಕ ತಿನ್ನಲು ಸಾಧ್ಯವಾಯಿತು. ಇದು ದಕ್ಷಿಣ ಭಾರತದ ಈ ಭಾಗದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಮಾಡಿದ ಮೊದಲ ವಿನೂತನ ವಿಧಾನವಾಗಿದೆ ಮತ್ತು ಇದು ಕಡಿಮೆ ವೆಚ್ಚದ ಮತ್ತು ಸುರಕ್ಷಿತ ವಿಧಾನವಾಗಿದೆ ಎಂದು ಡಾ ಶಿರನ್ ಶೆಟ್ಟಿ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

06/10/2022 04:36 pm

Cinque Terre

14.57 K

Cinque Terre

1

ಸಂಬಂಧಿತ ಸುದ್ದಿ