ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಂದಮ್ಮಗಳಿಗೆ ಪುನರ್ಜನ್ಮ.!

ವಿಶೇಷ ವರದಿ: ರಹೀಂ ಉಜಿರೆ

ಮಣಿಪಾಲ: ಆ ಇಬ್ಬರು ಮಕ್ಕಳ ಸಂಭ್ರಮ ಹೇಳತೀರದಾಗಿತ್ತು. ಚಿಗುರುವ ಹೊತ್ತಿಗೇ ಬಾಡಬೇಕಾದ ಕಾಯಿಲೆಯೊಂದಿಗೆ ಕಂದಮ್ಮಗಳು ನಲುಗಿದ್ದವು. ಆದರೆ ಕೆಎಂಸಿಯ ತಜ್ಞ ವೈದ್ಯರ ತಂಡವು ಈ ಕಂದಮ್ಮಗಳ ಮುಖದಲ್ಲಿ‌ ಮತ್ತೆ ಮಂಸಹಾಸ ಮೂಡುವಂತೆ ಮಾಡಿದೆ.

ಹೌದು.. ಕಾಯಿಲೆಯಿಂದ ಗುಣಮುಖವಾದ ಈ ಕಂದಮ್ಮಗಳ ಜೊತೆ ಸಂಭ್ರಮ ಹಂಚಿಕೊಳ್ಳಲು ಕೆಎಂಸಿ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಈ ವ್ಯವಸ್ಥೆ ಮಾಡಿತ್ತು. ಕೆಲವೇ ತಿಂಗಳುಗಳ ಹಿಂದೆ ರಕ್ತ ಕ್ಯಾನ್ಸರ್ ಗೆ ತುತ್ತಾಗಿದ್ದ ಪ್ರಣಮ್ ಮತ್ತು ನಿರುಪ್ ಇನ್ನೂ ಆರೇಳು ವರ್ಷದ ಮಕ್ಕಳು. ಇವರಲ್ಲಿ ಮಾರಕ ರಕ್ತ ಕ್ಯಾನ್ಸರ್ ನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಗಾಬರಿಯಾದ ಪೋಷಕರು ಕೆಎಂಸಿ ಆಸ್ಪತ್ರೆಗೆ ಮಕ್ಕಳನ್ನು ಕರೆತಂದರು.ಇಲ್ಲಿ ಪರೀಕ್ಷಿಸಿದ ವೈದ್ಯರು ,ಇಬ್ಬರೂ ಬಾಲಕರಿಗೆ ಅಸ್ಥಿಮಜ್ಜೆ ಕಸಿ ಮೂಲಕ ರೋಗವನ್ನು ಗುಣಪಡಿದಿದ್ದಾರೆ.

ಕೆಎಂಸಿ ಆಸ್ಪತ್ರೆಯಲ್ಲಿ ಇಂತಹ 10 ಮಂದಿಗೆ ಅಸ್ಥಿಮಜ್ಜೆ ಕಸಿ ಮೂಲಕ ಚಿಕಿತ್ಸೆ ನೀಡಲಾಗಿದೆ. ಆ ಪೈಕಿ ಈ 2 ಮಕ್ಕಳೂ ಸೇರಿದ್ದಾರೆ. ಈ ಸಂಭ್ರಮವನ್ನು ಮಕ್ಕಳು ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡರು. ಈ ಅಪೂರ್ವ ಕ್ಷಣಕ್ಕೆ ಮಕ್ಕಳು, ಮಕ್ಕಳ ಪೋಷಕರು ಮತ್ತು ವೈದ್ಯರ ತಂಡ ಸಾಕ್ಷಿಯಾಯಿತು.

ಕೆಎಂಸಿಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವು ಅಸ್ಥಿಮಜ್ಹೆ ಕಸಿ ಮೂಲಕ 98% ರೋಗವನ್ನು ಗುಣಪಡಿಸುವ ಯಶಸ್ಸು ಸಾಧಿಸಿದೆ. ಹೀಗಾಗಿ ಕಾಯಿಲೆಪೀಡಿತರಿಗೆ ಆಸ್ಪತ್ರೆಯು ಆಶಾಕಿರಣವಾಗಿ ಮೂಡಿಬಂದಿದೆ.

Edited By : Nagesh Gaonkar
PublicNext

PublicNext

04/08/2022 06:43 pm

Cinque Terre

30.55 K

Cinque Terre

1

ಸಂಬಂಧಿತ ಸುದ್ದಿ