ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರಾಗೃಹ ವಾಸಿಗಳಿಗೆ ದಂತ ಚಿಕಿತ್ಸಾ ಶಿಬಿರ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಮಣಿಪಾಲ ದಂತ ವಿಜ್ಞಾನ ಕಾಲೇಜು ವತಿಯಿಂದ ಇಂದು ದಂತ ವೈದ್ಯಕೀಯ ಚಿಕಿತ್ಸಾ ಶಿಬಿರ ಆಯೋಜನೆಗೊಂಡಿತು. ಈ ಸಂದರ್ಭ ಕಾರಾಗೃಹದಲ್ಲಿ ಬಂಧಿಯಾಗಿರುವ ಕೈದಿಗಳಿಗೆ ದಂತ ಚಿಕಿತ್ಸೆ ನೆರವೇರಿತು.

ಕಾರ್ಯಕ್ರಮವನ್ನು ಡಾ.ಸದಾಶಿವ ಶಾನಭಾಗ ಉದ್ಘಾಟಿಸಿ, ಅನಾರೋಗ್ಯ ಪೀಡಿತ ವ್ಯಕ್ತಿಯು ತನ್ನ ಕಾಯಿಲೆಗಳ ಬಗ್ಗೆಯ ಯೋಚಿಸುವುದರ ಮೂಲಕ ಮತ್ತಷ್ಟು ಮಾನಸಿಕವಾಗಿ ಕುಗ್ಗುನಾಗುತ್ತಾನೆ. ಈ ಹಿನ್ನೆಲೆಯಲ್ಲಿ ಈ ದಂತ ಶಿಬಿರದ ಸದುಪಯೋಗವನ್ನು ಪಡೆಯುವುದರ ಮೂಲಕ ಈ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜೆ. ಮಾತನಾಡಿ, ತಾವೆಲ್ಲರೂ ಸಕಾಲದಲ್ಲಿ ಈ ಶಿಬಿರದ ಸದುಪಯೋಗವನ್ನು ಪಡೆಯುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಕುಟುಂಬಸ್ಥರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಬೇಕೆಂದು ಕಾರಾಗೃಹವಾಸಿಗಳಿಗೆ ಅಗತ್ಯ ಉಚಿತ ಕಾನೂನು ಸೇವೆಗಳ ಮಾಹಿತಿಯನ್ನು ವಿವರಿಸಿ ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

05/07/2022 10:42 pm

Cinque Terre

4.6 K

Cinque Terre

1