ಕುಂದಾಪುರ: ಕುಂದಾಪುರ AFI ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಕುಂದಾಪುರದ ಹೋಟೆಲ್ ಶರೊನ್ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕುಂದಾಪುರ AFI ಅಧ್ಯಕ್ಷ Dr. ರವೀಂದ್ರ ತಲ್ಲೂರು ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
AFI ಜಿಲ್ಲಾಧ್ಯಕ್ಷ Dr. N.T ಅಂಚನ್ ಪಡುಬಿದ್ರಿ ಅವರು ವೈದ್ಯರ ದಿನಾಚರಣೆಯ ಮಹತ್ವ,ಸಮಾಜಕ್ಕೆ ವೈದ್ಯರ ಕೊಡುಗೆಗಳನ್ನು ವಿಸ್ತ್ರತವಾಗಿ ವಿವರಿಸಿದರು.ಹಳ್ಳಿ ಪ್ರದೇಶವಾದ ಆರ್ಡಿ, ಗೋಳಿಯಂಗಡಿ ಭಾಗದಲ್ಲಿ ಕಳೆದ 51ವರ್ಷಗಳಿಂದ ಕನಿಷ್ಠ ಶುಲ್ಕ, ಗರಿಷ್ಠ ಸೇವೆಯಿಂದ ಮನೆಮಾತಾಗಿರುವ Dr. ಪರಮೇಶ್ವರ್ ಉಡುಪ ಗೋಳಿಯಂಗಡಿ, ಕುಂದಾಪುರ ದೇವಿ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ ಖ್ಯಾತ ಫಿಸಿಷಿಯನ್ Dr. ಮಾನಂಜೆ ರವೀಂದ್ರ ರಾವ್.(DR.M. R RAO)ಮತ್ತು ಕುಂದಾಪುರ ತಾಲೂಕಿನಲ್ಲಿ ಮನೆಮಾತಾಗಿರುವ ಸುಮಾರು50,000ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿರುವ ಖ್ಯಾತ ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ ಶ್ರೀಮತಿ Dr. ಭವಾನಿ ರವೀಂದ್ರ ರಾವ್ ರವರನ್ನು ಆದರದಿಂದ ಸನ್ಮಾನಿಸಲಾಯಿತು.
ಸನ್ಮಾನಿತರಾದ Dr. ಪರಮೇಶ್ವರ್ ಉಡುಪರು ಮಾತನಾಡಿ 1971 ರ ದಶಕದಲ್ಲಿ ಫೋನ್ಇಲ್ಲದ, ಸಾರಿಗೆವ್ಯವಸ್ಥೆಇಲ್ಲದ, ಕರೆಂಟು ಇಲ್ಲದ,ಹೆಚ್ಚಿನ ವೈದ್ಯಕೀಯ ಸೌಲಭ್ಯ ಇಲ್ಲದ ಕಾಲದಲ್ಲಿ ಸೇವೆ ನೀಡಿರುವುದನ್ನು ವಿವರಿಸಿದರು. ಬೆಳಿಗ್ಗೆ 7 ರಿಂದ ತನ್ನ ಸೇವೆ ಪ್ರಾರಂಭಿಸುವುದು ಅವರ ವೃತ್ತಿ ಮೇಲಿನ ಪ್ರೀತಿಯ ಸಂಕೇತವಾಗಿರುತ್ತದೆ.Dr. ರವೀಂದ್ರ ರಾವ್ ಅವರಮಾತನಾಡಿ ತಾವು ವೃತ್ತಿ ಜೀವನ ಪ್ರಾರಂಭಿಸಿದ ವರ್ಷಗಳಿಂದ ಇಂದಿನ ಕಾಲ ಘಟ್ಟ ಕ್ಕೂ ರೋಗಿಗಳ ಮನೋಭಾವನೆಯಲ್ಲಿ ಗೌರವ,ಪ್ರೀತಿ, ನಂಬಿಕೆ ಯಲ್ಲಾ ಗಿರುವ ವ್ಯತ್ಯಾಸವನ್ನು ಹೇಳಿದರು. ವೈದ್ಯ ವೃತ್ತಿ ಒಂದು ಸೇವಾವೃತ್ತಿ. ಜನರು ಇದೊಂದು ವ್ಯಾವಹಾರಿಕ ವೃತ್ತಿಯೆಂದು ಭಾವಿಸಿರುವುದರಿಂದ ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲಿನ ಆರೋಪ, ಹಲ್ಲೆ ಇತ್ಯಾದಿ ಪ್ರಕರಣಗಳು ಜಾಸ್ತಿ ಆಗುತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
Dr. ಭವಾನಿ ರಾವ್ ರವರು ಮಾತನಾಡಿ ವೈದ್ಯ ವೃತ್ತಿ ಬಿಡುವಿಲ್ಲದ ನಿರಂತರ ವೃತ್ತಿ ಆಗಿರುತ್ತದೆ.ಹಗಲು- ರಾತ್ರಿಯೆನ್ನದೆ ಸೇವೆಯನ್ನು ನೀಡಬೇಕಾದ ಸಂದರ್ಭಗಳೇ ಜಾಸ್ತಿ.ಆದರೆ ಇದರಲ್ಲಿರುವ ಆತ್ಮತೃಪ್ತಿ ಬೇರೊಂದು ವೃತ್ತಿಯಲ್ಲಿ ಸಿಗಲಾರದು.ಅದೂ ತಮ್ಮ ತಾಲೂಕಿನಲ್ಲಿ ತಾವು ವೃತ್ತಿಯಲ್ಲಿ ಹೆಸರು ಮಾಡಿರುವುದು ಹೆಮ್ಮೆಯೆನಿಸುತ್ತದೆ ಎಂದರು ಶ್ರದ್ಧೆಯಿಂದ ನಮ್ಮ ವೃತ್ತಿಯನ್ನು ನಿರ್ವಹಿಸಿ ಎಂದು ವೈದ್ಯರಿಗೆ ಕಿವಿಮಾತು ಹೇಳಿದರು. Dr ಸಬಿತಾ ಆಚಾರ್ಯ ಪ್ರಾರ್ಥನೆಯಲ್ಲಿ, Dr J. K.ಶೆಟ್ಟಿ ಗೋಳಿ ಅಂಗಡಿ, Dr ಪೌರವ ಶೆಟ್ಟಿ,Dr ಪ್ರವೀಣ್ ಶೆಟ್ಟಿ ನಾಗೂರು,Dr ವಿಜಯಲಕ್ಷ್ಮಿ ಇವರು ಸಹಕರಿಸಿದರು ಜಿಲ್ಲಾ ಕಾರ್ಯದರ್ಶಿDr ಸತೀಶ್ ರಾವ್, ಉಡುಪಿ ತಾಲೂಕಿನ ಕಾರ್ಯದರ್ಶಿ Dr ಸಂದೀಪ್ ಸನಿಲ್ ಉಪಸ್ಥಿತರಿದ್ದರು. Dr ಸೋನಿ ಡಿ ಕೋಸ್ಟ ಕಾರ್ಯಕ್ರಮ ನಿರೂಪಣೆ ಮಾಡಿದರು ಬಳಿಕ Dr. ಅರುಣ್ ಶೆಟ್ಟಿ ಖ್ಯಾತ ಚರ್ಮರೋಗ ತಜ್ಞರು ಇವರಿಂದ psoriasis management ಬಗ್ಗೆ C. M. E ಕಾರ್ಯಕ್ರಮ ನಡೆಯಿತು. AFI ಕುಂದಾಪುರ ಕಾರ್ಯದರ್ಶಿ Dr ರಾಜೇಶ್ ಶೆಟ್ಟಿ ಅತಿಥಿಗಳಿಗೂ ಸಭಾಧ್ಯಕ್ಷರಿಗೆ ಹಾಗೂ AFI ಪದಾಧಿಕಾರಿಗಳಿಗೂ ನೆರೆದ ವೈದ್ಯ ಬಾಂಧವರಿಗೆ ಧನ್ಯವಾದ ಸಮರ್ಪಿಸಿದರು.
Kshetra Samachara
04/07/2022 07:45 pm